ಮಂಗಳೂರು, ಮೇ. 16(DaijiworldNews/TA): ಜಿಲ್ಲಾಧಿಕಾರಿ ಕಛೇರಿ ಉದ್ಘಾಟನೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ನಗರಕ್ಕೆ ಭೇಟಿ ನೀಡಿದರು. ಸಿಎಂ ಆಗಮನಕ್ಕೂ ಮುನ್ನವೇ ಮೇರಿಹಿಲ್ ಬಳಿ ಬಿಜೆಪಿ ಉತ್ತರ ಮಂಡಲ ಕಾರ್ಯಕರ್ತರಿಂದ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಸುಹಾಸ್ ಹತ್ಯೆ ಪ್ರಕರಣ ಎನ್ ಐಎ ಗೆ ವಹಿಸಲು ಆಗ್ರಹಿಸಿ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ ಎಂದು ಹೇಳಲಾಗಿದೆ.


ಸುಹಾಸ್ ಕೊಲೆಯಲ್ಲಿ ಉಗ್ರ ಕೈವಾಡ , ಪಿಎಫ್ ಐ ಶಂಕೆ ವ್ಯಕ್ತವಾಗಿದ್ದು ಎನ್ಐಎ ತನಿಖೆಗೆ ಒತ್ತಾಯ ಹೇರಲಾಗಿದೆ. ಇದೇ ವಿಚಾರವಾಗಿ ಸಿಎಂ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಮತ್ತು ತನಿಖೆಗೆ ಒತ್ತಾಯದ ಜೊತೆಗೆ ಸುಹಾಸ್ ಕುಟುಂಬಕ್ಕೆ ಸರಕಾರದಿಂದ ಪರಿಹಾರಕ್ಕೆ ಒತ್ತಾಯ ಹೇರಲಾಗಿದೆ.
ಸಿಎಂ ಆಗಮನಕ್ಕೆ ಮುನ್ನವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಾ ವೇಳೆ ರಾಜ್ಯ ಸರಕಾರ, ಮುಖ್ಯಮಂತ್ರಿ ವಿರುದ್ಧ ಕಾರ್ಯ ಕರ್ತರು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.