ಸುಳ್ಯ, ಮೇ. 16 (DaijiworldNews/AA): ಸಂಪಾಜೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದುದರಿಂದ ಸ್ಕಿಡ್ ಆಗಿ ಎರಡು ವಾಹನಗಳು ಅಪಘಾತ ಸಂಭವಿಸಿದ ಘಟನೆ ಮಾಣಿ ಮೈಸೂರು ರಸ್ತೆಯಲ್ಲಿ ಶುಕ್ರವಾರ ನಡೆದಿದೆ.

ಮಡಿಕೇರಿ ವ್ಯಾಪ್ತಿಯ ಸಂಪಾಜೆ ಅರಣ್ಯ ಇಲಾಖೆಯ ಜೀಪು ಮತ್ತು ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಹೆದ್ದಾರಿಯಿಂದ ಇಲಾಖೆಯ ಕಚೇರಿಗೆ ವಾಹನ ತಿರುವು ತೆಗೆದುಕೊಳ್ಳುವಾಗ ಮಡಿಕೇರಿ ಕಡೆಯಿಂದ ಬಂದ ಟೆಂಪೋ ವಾಹನ ಜೀಪಿಗೆ ಡಿಕ್ಕಿ ಹೊಡೆದು, ಎರಡು ವಾಹನಗಳು ಚರಂಡಿಗೆ ಬಿದ್ದಿದೆ.
ಅಪಘಾತದಲ್ಲಿ ಟೆಂಪೋ ಚಾಲಕ ಕಲ್ಲುಗುಂಡಿಯ ನಿವಾಸಿಗೆ ಗಂಭೀರ ಗಾಯವಾಗಿದೆ. ಅಪಘಾತದ ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾವೂದೇ ವಾಹನಗಳು ಸಿಗದೆ ಪರದಾಡಬೇಕಾಯಿತು. ಜೊತೆಗೆ ವಾಹನ ಸಿಗದ ಕಾರಣ ಗಾಯಾಳುವನ್ನು ರಸ್ತೆಯಲ್ಲೇ ಮಲಗಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.