ಮಂಗಳೂರು, ಮೇ. 17 (DaijiworldNews/AA): 2024-25ನೇ ಶೈಕ್ಷಣಿಕ ವರ್ಷದ ಸಿಬಿಎಸ್ಇ ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಮಂಗಳೂರು ಪಾಲ್ದಾನೆಯಲ್ಲಿರುವ ಕೇಂಬ್ರಿಡ್ಜ್ ಶಾಲೆಯು ಶೇಕಡ 100 ಫಲಿತಾಂಶವನ್ನು ಗಳಿಸುವ ಮೂಲಕ ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯ ಪರಂಪರೆಯನ್ನು ಎತ್ತಿಹಿಡಿದಿದೆ.

ಒಟ್ಟು 109 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 82 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ಟಾಪರ್ಗಳು:
* ಪ್ರಥಮ ಸ್ಥಾನ: ವಿ. ಸನ್ನಿಧಿ ಕಾಮತ್- 96.2%
* ದ್ವಿತೀಯ ಸ್ಥಾನ: ನೀಲಾಂಜನ ತಾಲಿತ್ತಾಯ- 96.0%
* ತೃತೀಯ ಸ್ಥಾನ: ತಾಶ್ವಿ ಶೆಟ್ಟಿ- 95.6%
ವಿಷಯವಾರು ಶೇಕಡ 100 ಸಾಧನೆ ಮಾಡಿದವರು:
* ವಿಜ್ಞಾನ: ಅವ್ನಿ ಶೆಟ್ಟಿ ಮತ್ತು ಮೊಹಮ್ಮದ್ ಝಹೀನ (100/100)
* ಕನ್ನಡ: ಶಿಥಿಲ್ ಸಾಲಿಯಾನ್ (100/100)
* ಮಾಹಿತಿ ತಂತ್ರಜ್ಞಾನ: ಶೋನ್ ಡಿಯೋನ್ ಸಿಕ್ವೇರಾ ಮತ್ತು ವಿ. ಸನ್ನಿಧಿ ಕಾಮತ್ (100/100)
"ನಮ್ಮ ವಿದ್ಯಾರ್ಥಿಗಳ ಸಾಧನೆಯು ಅವರ ಸಮರ್ಪಣೆ, ನಮ್ಮ ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಪೋಷಕರ ಬೆಂಬಲದ ಫಲಿತಾಂಶವಾಗಿದೆ. ನಮ್ಮ ಎಲ್ಲಾ ಯುವ ಸಾಧಕರಿಗೆ ನಾವು ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ" ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಹರ್ಷ ವ್ಯಕ್ತ ಪಡಿಸಿದ್ದಾರೆ. ಶೈಕ್ಷಣಿಕ ಮೇಲುಗೈ ಜೊತೆಗೆ ಮೌಲ್ಯಾಧಾರಿತ ವ್ಯಕ್ತಿತ್ವ ವಿಕಾಸಕ್ಕೂ ಮಹತ್ವ ನೀಡುವ ಕೇಂಬ್ರಿಡ್ಜ್ ಶಾಲೆ ಸದಾ ಸಂಪೂರ್ಣ ಶಿಕ್ಷಣದ ಮಾದರಿಯಾಗಿದೆ.