ಪುತ್ತೂರು, ಜೂ 20 (Daijiworld News/SM): ಇಲ್ಲಿನ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದಿದ್ದಾರೆ. ಗುರುವಾರ ಸಂಜೆ ಲಂಚ ಸ್ವೀಕಾರ ಮಾಡುತ್ತಿರುವ ವೇಳೆ ಎಸಿಬಿ ದಾಳಿ ನಡೆದಿದೆ.
ಪೈ ಕೆಟ್ರಿಂಗ್ ಮಾಲಕರಲ್ಲಿ ಕ್ಯಾಟ್ರಿಂಗ್ ಬಿಲ್ ನಲ್ಲಿ ಕಮೀಷನ್ ಕೊಡುವಂತೆ ತಹಶೀಲ್ದಾರ್ ಡಾ. ಪ್ರದೀಪ್ ಸತಾಯಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಕ್ಯಾಟ್ರಿಂಗ್ ಮಾಲಕರು ಎಸಿಬಿಗೆ ದೂರು ನೀಡಿದ್ದಾರೆ.
ಬೇಡಿಕೆಯ ಹಣವನ್ನು ಪಾವತಿಸಲು ಕ್ಯಾಟ್ರಿಂಗ್ ಮಾಲಕರು ಇಂದು ಮುಂದಾಗಿದ್ದಾರೆ. ಎಸಿಬಿ ಯವರ ಸೂಚನೆಯಂತೆ ಹಣ ಪಾವತಿಸಲು ಮುಂದಾದಾಗ, ಎಸಿಬಿ ದಾಳಿ ನಡೆದಿದ್ದು, ರೆಡ್ ಹ್ಯಾಂಡ್ ಆಗಿ ತಹಶೀಲ್ದಾರ್ ಬಲಿಗೆ ಬಿದ್ದಿದ್ದಾರೆ. ಇದೀಗ ತಹಶೀಲ್ದಾರ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.