ಉಡುಪಿ, ಜೂ 21 (Daijiworld News/MSP): ಇಲ್ಲಿನ ಕೆ.ಜಿ ರೋಡ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಪಘಾತ ನಡೆದು ಓರ್ವ ಸಾವನ್ನಪ್ಪಿ ಇನ್ನೋರ್ವ ಸಣ್ಣಪಟ್ಟ ಗಾಯಗಳಿಂದ ಪಾರಾದ ಘಟನೆ ಜೂ.21ರ ಶುಕ್ರವಾರ ಬೆಳಗ್ಗೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಡಿವೈಡರ್ ಏರಿ ಪಲ್ಟಿ ಹೊಡೆದಿದ್ದು ಪರಿಣಾಮ ಟಿಪ್ಪರ್ ನಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದೇ ವೇಳೆ ಅಪಘಾತ ಸ್ಥಳದ ಮೂಲಕವಾಗಿ ಉಡುಪಿ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೆರವು ನೀಡಿದ್ದಾರೆ.ಅಪಘಾತದ ತೀವ್ರತೆ ನೋಡಿ ತಕ್ಷಣ ಅಂಬ್ಯುಲೆನ್ಸ್ ಹಾಗೂ ಪೊಲೀಸ್ ಇಲಾಖೆಗೆ ಕರೆ
ಮಾಡಿ ತಿಳಿಸಿದ್ದು, ಹೆದ್ದಾರಿಯಲ್ಲಿ ಅಡ್ಡವಾಗಿ ಬಿದ್ದಿದ್ದ ಟಿಪ್ಪರ್ ತೆರವಿಗೆ ಸೂಕ್ತ ವ್ಯವಸ್ಥೆ ಮಾಡಿಸಿದ ಸಂಚಾರ ಸುಗಮಗೊಳಿಸಲು ವ್ಯವಸ್ಥೆ ಮಾಡಿದರು. ಆ ಬಳಿಕ ಗಾಯಾಳು ಆಸ್ಪತ್ರೆಗೆ ಕಳುಹಿಸಿ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮಕ್ಕಾಗಿ ಮುಂದುವರಿದರು.