ಬಂಟ್ವಾಳ, ಜೂ. 16 (DaijiworldNews/AA): ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಸೋಮವಾರ ಬಂಟ್ವಾಳ ತಾಲೂಕಿನ ಅಮ್ಮುಂಜೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಮೃತಪಟ್ಟ ಯುವಕನನ್ನು ಅಮ್ಮುಂಜೆ ನಿವಾಸಿ ಸಾಗರ್ (28) ಎಂದು ಗುರುತಿಸಲಾಗಿದೆ.
ಪೈಂಟಿಗ್ ಕೆಲಸ ಮಾಡುತ್ತಿದ್ದ ಸಾಗರ್, ಜೂನ್ 14 ರಂದು ತನ್ನ ತಾಯಿಯೊಂದಿಗೆ ಬಿ.ಸಿ. ರೋಡ್ಗೆ ಹೋಗಿ ಬಂದಿದ್ದ. ಸಂಜೆ 5 ಗಂಟೆಯ ಸುಮಾರಿಗೆ ವಾಪಸ್ ಬರುವಾಗ, ಅವರು ಬೆಂಜನಪದವು ಮೂರು ಮಾರ್ಗ ಬಳಿ ಆಟೋದಿಂದ ಇಳಿದು ಹೋದವನು ಮನೆಗೆ ಹಿಂದಿರುಗಿರಲಿಲ್ಲ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಸೋಮವಾರ, ವಿದ್ಯಾ ನಗರ ಹೈಸ್ಕೂಲ್ ರಸ್ತೆ ಬಳಿಯ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿರಬಹುದು ಅಥವಾ ಅಮಲು ಪದಾರ್ಥ ಸೇವಿಸಿಯೋ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.