ದಕ್ಷಿಣ ಕನ್ನಡ, ಜೂ. 19 (DaijiworldNews/TA): ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ ವಿ ಅವರು ಬುಧವಾರ ಸಂಜೆ ಅಧಿಕಾರ ಸ್ವೀಕರಿಸಿದರು.



ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು. ಮುಲ್ಲೈ ಮುಗಿಲನ್ ಎಂಪಿ ಜೂ.17, 2023ರಂದು ದ.ಕ. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ 2 ವರ್ಷ ಪುರ್ಣಗೊಳಿಸಿರುವ ಬೆನ್ನಲ್ಲೆ ಅವರಿಗೆ ವರ್ಗಾವಣೆಯಾಗಿದೆ.