ಸುಳ್ಯ, ಜೂ. 19 (DaijiworldNews/TA): ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಸದ್ಯ ಇಲ್ಲಿಯ ಮಲ್ಲಿಕಾ ಸ್ಟಾಲ್ ಗೆ ಸೇರಿದ ಜ್ಯೂಸ್ ಅಂಗಡಿಯಿಂದ ವ್ಯಕ್ತಿಯೊಬ್ಬ ನಿಂಬೆ ಹಣ್ಣು ಕದಿಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಅಂಗಡಿಯ ಮಾಲಕರು ವ್ಯಕ್ತಿಯ ಬಳಿ ನಿಂಬೆ ಹಣ್ಣಿನ ಸಿಪ್ಪೆ ತೆಗೆದುಕೊಂಡು ಹೋಗಲು ಹೇಳಿದ್ದರು. ಆದರೆ ವ್ಯಕ್ತಿಯು ಸಿಪ್ಪೆಯ ಜೊತೆಗೆ ನಿಂಬೆಹಣ್ಣು ಕೂಡ ಕದ್ದುಕೊಂಡು ಹೋಗಿರುವ ದೃಶ್ಯಾವಳಿ ಇದೀಗ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.