ಉಡುಪಿ, ಜೂ. 19 (DaijiworldNews/AA): ಪ್ರಸ್ತುತ ಇಸ್ರೇಲ್ ಹಾಗೂ ಇರಾನ್ ದೇಶದ ನಡುವೆ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಇಸ್ರೇಲ್ ಹಾಗೂ ಇರಾನ್ ದೇಶಗಳಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗೆ ತೆರಳಿರುವ ಮತ್ತು ವಾಸವಾಗಿರುವ ಜಿಲ್ಲೆಗೆ ಸಂಬಂಧಪಟ್ಟ ಭಾರತದ ಪ್ರಜೆಗಳಿದ್ದಲ್ಲಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ

ಇಸ್ರೇಲ್-ಇರಾನ್ ದೇಶಗಳಲ್ಲಿ ನೆಲೆಸಿರುವ ಭಾರತದ ಪ್ರಜೆಗಳ ಬಗ್ಗೆ ಮಾಹಿತಿಯನ್ನು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾದ ಕಂಟ್ರೋಲ್ ರೂಂ ಸಂಖ್ಯೆ: 1077 / 0820-2574802 ಅಥವಾ ರಾಜ್ಯ ಸರಕಾರದ ತುರ್ತು ಸಂಖ್ಯೆ: 080-22340676 ಅಥವಾ 22253707 ಗೆ ಕರೆ ಮಾಡಿ, ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿ ಹೇಳಿದೆ.