ಮಂಗಳೂರು,ಜೂ 22 (Daijiworld News/MSP): ಕ್ರಿಕೆಟ್ ಬೆಟ್ಟಿಂಗ್ ವ್ಯವಹಾರಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ನಗರದಲ್ಲಿ ವಿಶ್ವಕಪ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಜೂ 21 ರ ಶುಕ್ರವಾರ ಇಬ್ಬರನ್ನು ಬಂಧಿಸಿದ್ದಾರೆ.
ಕಾವೂರು ಬಾರೊಂದರ ವೈಟರ್, ಪುತ್ತೂರು ಕೊಡಿಂಬಾಡಿ ನಿವಾಸಿ ಗಣೇಶ್ ರೈ, ಹಾಗೂ ಬೊಂದೆಲ್ ಕೆ.ಎಚ್.ಬಿ ಕಾಲೋನಿಯ ನಿವಾಸಿ ಸಂತೋಷ್ ಬಂಧಿತರು.
ಆರೋಪಿಗಳ ಬಳಿಯಿಂದ 20ಸಾವಿರ ನಗದು ಹಾಗೂ ಆಟಕ್ಕೆ ಬಳಸಿದ್ದ 20 ಸಾವಿರ ರೂ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಹರೀಶ್ ಶೆಟ್ಟಿ ಹಾಗೂ ಪ್ರಮೋದ್ ತಲೆಮರೆಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾವೂರು ಪೊಲೀಸ್ ಠಾಣೆಯ ಇನ್ ಸ್ಫೆಕ್ಟರ್ ಕೆ.ಆರ್ ನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.