ಮಂಗಳೂರು, ಜೂ. 20 (DaijiworldNews/TA): ಸಂತ ಆಗ್ನೆಸ್ ಸಿ ಬಿ ಎಸ್ ಇ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಲ್ ಕೆ ಜಿಯಿಂದ 9ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ತೋರಿದ ವಾರ್ಷಿಕ ಸಾಧನೆಗೆ ಅನುಗುಣವಾಗಿ ಪ್ರಮಾಣ ಪತ್ರ ಹಾಗೂ ಸಾಧನಾ ಫಲಕಗಳನ್ನು ನೀಡಲಾಯಿತು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಸೈಂಟ್ ಆಗ್ನೆಸ್ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಗಣಿತ ಉಪನ್ಯಾಸಕರಾದ ಭಗಿನಿ ಜಾನೆಟ್ ಹಾಗೂ ಪದವಿ ಕಾಲೇಜಿನ ಗಣಿತ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಭಗಿನಿ ಲಿನೆಟ್ ಡಿಸೋಜಾ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ತರಗತಿಯಲ್ಲಿ ಅತ್ಯಧಿಕ ಅಂಕ ಹಾಗೂ ವಿಷಯವಾರು ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಹಾಗೂ ಶೈಕ್ಷಣಿಕ ವರ್ಷದಲ್ಲಿ ನೂರು ಶೇಕಡ ಹಾಜರಾತಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಭಗಿನಿ ಮರಿಯ ಸಾರಿಕ, ಉಪ ಪ್ರಾಂಶುಪಾಲರಾದ ಭಗಿನಿ ಮೀನಾ ಫೆರ್ನಾಂಡಿಸ್, ಸಂಯೋಜಕರಾದ ಭ.ಲವಿ ಶಾಂತಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.