ಕಾಸರಗೋಡು,,ಜೂ. 20 (DaijiworldNews/AK): ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದ ಘಟನೆ ಕುಂಬಳೆ ಯಲ್ಲಿ ನಡೆದಿದ್ದು, ಓರ್ವ ನನ್ನು ಬಂಧಿಸಿದ್ದಾರೆ. ಗುರುವಾರ ಸಂಜೆ 4.30 ರ ಸುಮಾರಿಗೆ ಘಟನೆ ನಡೆದಿದೆ. ಹತ್ತನೇ ತರಗತಿ ಹಾಗೂ ಪ್ಲಸ್ ಟು ವಿದ್ಯಾರ್ಥಿಗಳ ಗುಂಪುಗಳ ನಡುವೆ ಈ ಘರ್ಷಣೆ ನಡೆದಿದೆ . ಹೊರಗಿನಿಂದ ಬಂದ ಗುಂಪು ಕೂಡಾ ಹೊಡೆದಾಟದಲ್ಲಿ ಭಾಗಿಯಾಗಿತ್ತು ಎನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಘರ್ಷಣೆ ಯನ್ನು ನಿಯಂತ್ರಿಸಿದರು. ಉಪ್ಪಳ ಗೇಟ್ ಸಮೀಪದ ಇಸ್ಮಾಯಿಲ್ ರಿಯಾಜ್ ( 20) ಬಂಧಿತ ಯುವಕ.ಘಟನೆಗೆ ಸಂಬಂಧಪಟ್ಟಂತೆ ೧೫ ವಿದ್ಯಾರ್ಥಿಗಳು ಹಾಗೂ 10 ಹೊರಗಿಂದ ಬಂದ ತಂಡದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು , ತನಿಖೆ ಮುಂದುವರಿಸಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಂಬಳೆ ಮಾರುಕಟ್ಟೆ ರಸ್ತೆಯಲ್ಲಿ ಘಟನೆ ನಡೆದಿದೆ. ವರ್ತಕರು ಹಾಗೂ ಮೀನು ಮಾರಾಟಗಾರರು ಮನವೊಲಿಸಲು ಯತ್ನಿಸಿದರೂ ವಿಫಲಗೊಂಡ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಗುಂಪನ್ನು ಚದುರಿಸಿ ನಿಯಂತ್ರಣಕ್ಕೆ ತಂದರು.
ಈ ಹಿಂದೆಯೂ ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿತ್ತು. ಇದೀಗ ಪುನರಾವರ್ತನೆಯಾಗಿದೆ. ಕ್ಷುಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಗುಂಪುಗಳ ನಡುವೆ ಘರ್ಷಣೆ ನಡೆದಿದೆ.