ಮಂಗಳೂರು,ಜೂ. 21 (DaijiworldNews/AK): ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸರಕಾರಿ ಪ್ರೌಢಶಾಲೆ ನಾಲ್ಯಪದವು ಇಲ್ಲಿ ಬಹಳ ಅರ್ಥಪೂರ್ಣವಾಗಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.




ಶಾಲಾ ಮುಂಭಾಗದಲ್ಲಿ ಬೆಳಗ್ಗೆ 9.15ಕ್ಕೆ ದೈಹಿಕ ಶಿಕ್ಷಣ ಶಿಕ್ಷಕರು ಯೋಗಾಸನದ ಪ್ರೋಟೋಕಾಲ್ ನಂತೆ, ಸರಳ ವ್ಯಾಯಾಮಗಳನ್ನು ಮಾಡಿಸಿ, ಯೋಗ ಮಂತ್ರ ಪಠಿಸಿ, ಪ್ರಾಣಾಯಾಮ ಹಾಗೂ ಸೂರ್ಯ ನಮಸ್ಕಾರಗಳನ್ನು ಮಾಡಿಸಿದರು.
ಮುಖ್ಯ ಶಿಕ್ಷಕರು ದಿನದ ಮಹತ್ವದ ಬಗ್ಗೆ ಮನವರಿಕೆ ಮಾಡಿಸಿ, ಈ ವರ್ಷದ ಯೋಗ ದಿನದ ಘೋಷ ವಾಕ್ಯವನ್ನು ನೆನಪಿಸಿ, ಯೋಗ ದಿನಾಚರಣೆಯು ಒಂದು ದಿನದ ಸಂಭ್ರಮವಾಗಿ ಉಳಿಯದೆ, ದಿನಂಪ್ರತಿ ಕೊಂಚ ಸಮಯ ನಮಗಾಗಿ, ಆರೋಗ್ಯ ಕಾಳಜಿಗಾಗಿ ಮೀಸಲಿಡುವಂತೆ ಪಣತೊಡೋಣ ಎಂಬ ಕಿವಿಮಾತುಗಳೊಂದಿಗೆ ಯೋಗ ಪ್ರಮಾಣವಚನ ಬೋಧಿಸಿದರು.
ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಉತ್ಸಾಹದಿಂದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.