ಮಂಗಳೂರು, ಜೂ. 22 (DaijiworldNews/AA): ಶಿವಮೊಗ್ಗದಿಂದ ಮಂಗಳೂರು ಕಡೆಗೆ ನೇರಳೆ ಹಣ್ಣು ಸಾಗಿಸುತ್ತಿದ್ದ ಪಿಕಪ್ ವಾಹನ ಶನಿವಾರ ಮುಂಜಾನೆ 5 ಗಂಟೆಗೆ ಮುಕ್ಕ ಜಂಕ್ಷನ್ ಬಳಿ ಡಿವೈಡರ್ ಏರಿ ಪಲ್ಟಿಯಾಗಿದೆ.

ಘಟನೆಯ ಪರಿಣಾಮ ಸುಮಾರು 5 ಲಕ್ಷ ರೂ. ಮೌಲ್ಯದ ನೇರಳೆ ಹಣ್ಣು ರಸ್ತೆ ಪಾಲಾಗಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಪಿಕಪ್ ಪಟ್ಟಿಯಾದ ವೇಳೆ ರಸ್ತೆಯಲ್ಲಿ ಬಿದ್ದ ನೇರಳೆ ಹಣ್ಣುಗಳನ್ನು ಪರಿಸರದ ಜನರು ಒಂದಿಷ್ಟು ನೇರಳೆ ಹಣ್ಣುಗಳನ್ನು ಕೊಂಡೊಯ್ದರು.