ಬಂಟ್ವಾಳ, ಜೂ. 23 (DaijiworldNews/TA): ಕಾರಣೀಕ ಕ್ಷೇತ್ರವಾದ ಬಂಟ್ವಾಳದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಜುಲೈ 22 ರಂದು ಈ ವರ್ಷದ ಅತೀ ಹೆಚ್ಚು ಅಗೆಲು ಸೇವೆ ನಡೆದಿದೆ ಎಂದು ದೈವಸ್ಥಾನದ ಅಧಿಕೃತ ಮಾಹಿತಿ ತಿಳಿಸಿದ್ದು, ಇಂದು ಒಟ್ಟು 3871 ಅಗೆಲು ಸೇವೆ ನಡೆದಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಕೂಡ ಜೂನ್ ತಿಂಗಳಿನಿಂದ ಅಗಸ್ಟ್ ತಿಂಗಳ ವರೆಗೆ ಇದೇ ಮಾದರಿಯಲ್ಲಿ ಅಗೆಲು ಸೇವೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ಜೂನ್ 2 ರಂದು 3908 ಅಗೆಲು ಸೇವೆ ನಡೆದಿತ್ತು.
ಆಟಿ ತಿಂಗಳಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಅಗೆಲು ಸೇವೆಗಳು ನಡೆಯುತ್ತದೆ ಎಂದು ಹೇಳಿದ್ದಾರೆ. ವಾರದ ಮೂರು ದಿನ ಅಂದರೆ ಆದಿತ್ಯವಾರ ,ಮಂಗಳವಾರ ಮತ್ತು ಶುಕ್ರವಾರ ಮೂರು ದಿನಗಳ ಕಾಲ ಇಲ್ಲಿ ಅಗೆಲು ಸೇವೆ ನಡೆಯುತ್ತದೆ.