ಮಂಗಳೂರು, ಜೂ 22 (Daijiworld News/MSP): ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ರಾಜೇಶ್ ಭಟ್ (48) ವಿಧಿವಶರಾಗಿದ್ದಾರೆ. ಮಣ್ಣಗುಡ್ಡೆಯ ಗಾಂಧಿನಗರದ ತಮ್ಮದೇ ಪಾಲುದಾರಿಕೆಯ "ಭಟ್ ನರ್ಸಿಂಗ್ ಹೋಮ್ " ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು , ನಗರದ ಮಂಗಳಾ ಸ್ಟೇಡಿಯಂನಲ್ಲಿ ಜೂ.22 ರಂದು ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸಂದರ್ಭ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಡಾ.ರಾಜೇಶ್ ಅವರು ಪ್ರಸಿದ್ಧ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದ ದಿವಂಗತ ಡಾ.ಮಾಲತಿ ಭಟ್ ಅವರ ಪುತ್ರರಾಗಿದ್ದಾರೆ. ಪಂದ್ಯಾಟದ ವೇಳೆ ಇವರು ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ಮೃತ ಡಾ. ಭಟ್ ಅವರು ಪತ್ನಿ ಡಾ.ವೀಣಾ ಭಟ್ ಮತ್ತು ಕುಟುಂಬ ಸದಸ್ಯರನ್ನು ಅಗಲಿದ್ದಾರೆ.