ಸುಳ್ಯ,ಜೂ. 27(DaijiworldNews/TA) : ಸಂಪಾಜೆ ಸಮೀಪದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ದೇವರಕೊಲ್ಲಿ ಸಮೀಪ ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.


ಕಾರು ಸುಳ್ಯ ಕಡೆಯಿಂದ ಮೈಸೂರು ಕಡೆ ತೆರಳುತ್ತಿದ್ದರೆ ಬಸ್ ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಕಾರ್ ಹಾಗೂ ಬಸ್ ಎರಡೂ ವಾಹನಗಳು ಜಖಂಗೊಂಡಿದೆ.