ಮಂಗಳೂರು, ಜೂ. 28 (DaijiworldNews/AA): ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ನಗರ ಯೋಜನೆ ವಿಭಾಗದಲ್ಲಿ ಕಡತಗಳನ್ನು ಪರಿಶೀಲಿಸಿದರು.

ಕಡತ ಪರಿಶೀಲನೆ ವೇಳೆ ಟಿ.ಡಿ.ಆರ್.ನಲ್ಲಿ ಕೆಲವು ಅವ್ಯಹಾರ ನಡೆದಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಜೂ.೨೧ರಂದು ಮೊದಲ ಬಾರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತಡರಾತ್ರಿವರೆಗೆ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಕಡತಗಳನ್ನು ಪರಿಶೀಲಿಸಿದ್ದರು. ಈ ವೇಳೆ ಹಲವು ಅವ್ಯವಹಾರ, ಅಧಿಕಾರ ದುರುಪಯೋಗ ನಡೆದಿರುವುದು ಕಂಡು ಬಂದಿತ್ತು.
ನಂತರ, ಜೂ.25ರಂದು ಪಾಲಿಕೆಯ ಜಂಟಿ ಆಯುಕ್ತ ರವಿ ಕುಮಾರ್ ಎಂ. ಅವರ ಕಚೇರಿಯಲ್ಲಿ ಕಡತ ಪರಿಶೀಲಿಸಿದ್ದರು.
ಶುಕ್ರವಾರ ಲೋಕಾಯುಕ್ತ ತಂಡವು ಕಡತ ಪರಿಶೀಲನೆಯನ್ನು ಪುನರಾರಂಭಿಸಿ, ಕೇಂದ್ರ ಕಚೇರಿಗೆ ಸಮಗ್ರ ವರದಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದೆ. ಪ್ರಧಾನ ಕಚೇರಿಯ ಸೂಚನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.