ಪುತ್ತೂರು, ಜೂ. 28 (DaijiworldNews/AA): ಸುಳ್ಯದ ಮಂಡೆಕೋಲುವಿಲ್ಲಿ ದೊರೆತ ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಣೆ ಮಾಡಿ ಕೃತಕ ಕಾವು ನೀಡಿ 14 ಮೊಟ್ಟೆಯಿಂದ 14 ಮರಿಗಳು ಸುರಕ್ಷಿತವಾಗಿ ಹೊರ ಬಂದಿದೆ. ಹೊರಬಂದ 14 ಮರಿಗಳನ್ನೂ ಅರಣ್ಯ ಇಲಾಖೆಯ ಸಮಿತಿಯೊಂದಿಗೆ ಉರಗ ಪ್ರೇಮಿ ತೇಜಸ್ ಅವರು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.


ಮುಂಡೆಕೋಲು ಹರೀಶ್ಚಂದ್ರ ಗೌಡ ಅವರ ಮನೆಯಲ್ಲಿ ದೊರೆತ 14 ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಣೆ ಮಾಡಲಾಗಿತ್ತು. ಅದಕ್ಕೆ 35 ದಿನದಿಂದ ಕೃತಕ ಕಾವು ನೀಡಿ 14 ಮೊಟ್ಟೆಗಳಿಂದ 14 ಮರಿಗಳು ಸುರಕ್ಷಿತವಾಗಿ ಹೊರಬಂದಿವೆ. ಹೊರಬಂದ ಈ ಮರಿಗಳನ್ನು ಅರಣ್ಯ ಇಲಾಖೆಯ ಸಮಿತಿಯೊಂದಿಗೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು.
ಈ ಸಂದರ್ಭ ವಲಯ ಅರಣ್ಯ ಅಧಿಕಾರಿ ಮಂಜುನಾಥ್, ಉಪ ವಲಯ ಅರಣ್ಯ ಅಧಿಕಾರಿ ಸಂದೀಪ್, ಬೀಟ್ ಫಾರೆಸ್ಟರ್ ದೀಪಕ್ ಮತ್ತು ಪ್ರತಾಪ್ ಚೌಡಪ್ಪನವರ್, ಅರಣ್ಯ ವೀಕ್ಷಕ ಶ್ರೀಧರ್ ಮೈಲಪ್ಪ ಜೊತೆಗಿದ್ದರು.
ಇನ್ನು ಬನ್ನೂರು ಕುಮೆರಡ್ಕ ನಿವಾಸಿ ತೇಜಸ್ ಅವರು ಕಳೆದ ವರ್ಷ 38 ಹೆಬ್ಬಾವಿನ ಮರಿಗಳನ್ನು ರಕ್ಷಣೆ ಮಾಡಿದ್ದರು.