ಬೆಳ್ತಂಗಡಿ, ಜೂ. 28 (DaijiworldNews/TA): ತೋಟದಲ್ಲಿ ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ವೇಳೆ ಕೊಕ್ಕೆ ಹೆಚ್.ಟಿ. ಲೈನ್ ಗೆ ತಾಗಿ ವಿದ್ಯುತ್ ತಗುಲಿದ ಪರಿಣಾಮ ಮದ್ದು ಸಿಂಪಡನೆ ಮಾಡುತಿದ್ದ ವ್ಯಕ್ತಿ ಮೃತ ಪಟ್ಟ ಘಟನೆ ಬೆಳ್ತಂಗಡಿಯ ಅರಸಿನಮಕ್ಕಿ ಎಂಜಿರ ಎಂಬಲ್ಲಿ ನಡೆದಿದೆ.

ಉಡೈರೆ ಕೃಷ್ಣಪ್ಪ ಕುಲಾಲ್ (49) ವಿದ್ಯುತ್ ಆಘಾತಕ್ಕೊಳಗಾಗಿ ಮೃತ ಪಟ್ಟ ವ್ಯಕ್ತಿ. ವಿದ್ಯುತ್ ಆಘಾತಕ್ಕೆ ಈಡಾದ ಕೂಡಲೇ ಕೃಷ್ಣಪ್ಪ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.