ಮಂಗಳೂರು, ಜೂ. 30 (DaijiworldNews/AA): ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸಲು ಬಯಸುತ್ತೇವೆ. ಅದಕ್ಕಾಗಿ ನಾವು ನಮ್ಮ ದೈನಂದಿನ ಚಟುವಟಿಕೆಗಳು, ವಿಶೇಷವಾಗಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ. ಮಂಗಳೂರಿನ ಬೋಳಾರದ ದೈಹಿಕ ತರಬೇತುದಾರ ಸಂದೀಪ್ ಎಸ್. ರಾವ್ ಯಾವಾಗಲೂ ತಮ್ಮ ಮತ್ತು ತಮ್ಮ ವಿದ್ಯಾರ್ಥಿಗಳ ಆರೋಗ್ಯಕ್ಕೆ ಆದ್ಯತೆ ನೀಡಿದ್ದಾರೆ. ಆದರೆ ಅವರ ಜೀವನವು ಅನಿರೀಕ್ಷಿತ ತಿರುವುಗಳನ್ನು ತೆಗೆದುಕೊಳ್ಳುತ್ತದೆ.

ಸಂದೀಪ್ ಅವರಿಗೆ ಮಾರಣಾಂತಿಕ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಗಿದೆ. ಈ ಸುದ್ದಿಯನ್ನು ತಿಳಿದ ಅವರ ಕುಟುಂಬ ಆಘಾತಕ್ಕೊಳಗಾಗಿತ್ತು. ವೈದ್ಯರು ಲಿವರ್ ಕಸಿ (ಲಿವರ್ ಟ್ರಾನ್ಸ್ಪ್ಲಾಂಟ್) ಮಾಡಬೇಕೆಂದು ತಿಳಿಸಿದ್ದು, ಇದಕ್ಕೆ ಸುಮಾರು 40 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಅವರ ಪತ್ನಿಗೆ, ಸಂದೀಪ್ ಅವರ ವಾರದ ಔಷಧಿಗಳ ವೆಚ್ಚವನ್ನು ಸಹ ನಿಭಾಯಿಸಲು ಕಷ್ಟವಾಗುತ್ತಿರುವಾಗ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ.
ಸಂದೀಪ್ ಕೇವಲ ತರಬೇತುದಾರರಲ್ಲ ಅವರು ಮಾಜಿ ಕುಸ್ತಿಪಟು ಆಗಿದ್ದು, ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ. ಕ್ರೀಡೆಗೆ ಅವರ ಕೊಡುಗೆಯನ್ನು ಗುರುತಿಸಿ, ಅವರಿಗೆ ಪ್ರತಿಷ್ಠಿತ ತುಳುನಾಡ ಕೇಸರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇಂದು ಅವರು ಹಾಸಿಗೆ ಹಿಡಿದಿದ್ದು, ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಲೂ ಸಾಧ್ಯವಾಗುತ್ತಿಲ್ಲ.
ಸಂದೀಪ್ ಅವರ ಕುಟುಂಬ ಈಗ ಬೆಂಬಲಕ್ಕಾಗಿ ವಿನಂತಿಸುತ್ತಿದೆ. ಅವರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇನ್ನು ಆರ್ಥಿಕ ಸಹಾಯದ ಜೊತೆಗೆ, ಕುಟುಂಬವು ನಿಮ್ಮ ಪ್ರಾರ್ಥನೆ ಮತ್ತು ಶುಭ ಹಾರೈಕೆಗಳನ್ನು ಸಹ ಕೋರುತ್ತದೆ.
ಸಹಾಯಕ್ಕಾಗಿ ಬ್ಯಾಂಕ್ ಖಾತೆ ವಿವರಗಳು:
Name: Sandeep S Rao
A/C No: 0046053000058484
Bank: South Indian Bank, Mangaluru Branch
IFSC: SIBL0000046
Contact: 95382 61733