ಮಂಗಳೂರು,ಜೂ. 30 (DaijiworldNews/AK): ಜಿಲ್ಲಾ ಜನತಾ ದಳ (ಜಾ) ಪಕ್ಷದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಸಭೆಯನ್ನು ತಾಲ್ಲೂಕು ಕಚೇರಿ ಮುಂಭಾಗ ಕೈಗೊಳ್ಳಲಾಯಿತು.

ಪಕ್ಷದ ರಾಜ್ಯ ವಕ್ತಾರ M B ಸದಾಶಿವ, ರಾಜ್ಯಪ್ರಧಾನ ಕಾರ್ಯದರ್ಶಿ ವಿಟ್ಲ ಮಹಮ್ಮದ್ ಕುಂಞ, ಹೈದರ್ ಪರ್ತಿಪಾಡಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ ಸ್ವಾಗತಿಸಿ ಜಿಲ್ಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಮೂಲ್ಕಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ, ಉಡುಪಿ ಜಿಲ್ಲಾ ಉಸ್ತುವಾರಿ ಪ್ರವೀಣ ಚಂದ್ರ ಜೈನ್, ಅಮರಶ್ರೀ ಅಮರನಾಥ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಅಜೀಜ್ ಕುದ್ರೋಳಿ, ಕಡಬ ಮೀರಾಸಾಬ್, ಮೋಹನ್ ದಾಸ್ ಉಳ್ಳಾಲ, ಉಸ್ಮಾನ್ ಅಪ್ಸ, ಧನರಾಜ್, ಪುಷ್ಪರಾಜ, ಭಾರತಿ ಪುಷ್ಪರಾಜ, ಮಹಾವೀರ್ ಪುತ್ತೂರು, ವೀಣಾ ಶೆಟ್ಟಿ, ಚೂಡಾಮಣಿ, ವಿನ್ಸೆಂಟ್ ಸುರತ್ಕಲ್, ಕನಕದಾಸ, ರವೀಂದ್ರ ಉಳ್ಳಾಲ, ನಾಗೇಶ್, ಮುನೀರ್ ಮುಕ್ಕಛೇರಿ, ಬೆಂಗ್ರೆ ಹಮೀದ್, ಬೆಂಗ್ರೆ ಮಹಮ್ಮದ್, ಪುತ್ತುಮೋನು, ಸುಕುಮಾರ್ ಕೂಡ್ತಗೊಳಿ, ರಾಕೇಶ್ ಕುಂಟಿಕಾನ್, ಸಂಜೀವ ಮಡಿವಾಳ ಕಟೀಲ್, ನಝೀರ್ ಸಮನಿಗೆ, ಸುಮಿತ್ ಸುವರ್ಣ, ಧರ್ಮರಾಜ ಅಡ್ಕಾಡಿ ಮುಂತಾದ ಮುಖಂಡರು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ M B ಸದಾಶಿವ, ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆೆಸ್ ಸರಕಾರ ಎರಡು ವರ್ಷಗಳಿಂದ ಅಧಿಕಾರದ ಮದದಲ್ಲಿ ಆಡಳಿತ ಚುಕ್ಕಾಾಣಿ ಹಿಡಿದಿದೆ. ಇಡೀ ರಾಜ್ಯದ ಬೊಕ್ಕಸ ಖಾಲಿ ಮಾಡಿ ಜನಸಾಮಾನ್ಯರಿಗೆ ಅನಗತ್ಯ ಹೊರೆ ಹೊರಿಸಿ ಸಾಮಾನ್ಯ ಜನ ನೆಮ್ಮದಿಯಿಂದ ಬದುಕದಂತೆ ಮಾಡಿದೆ. ಯಾವುದೇ ಪಕ್ಷದ ಹಂಗಿಲ್ಲದೆ ಸರಕಾರ ಸ್ವಯಂ ಬಲದಿಂದ ಅಧಿಕಾರ ಮಾಡಿ ಜನಸಾಮಾನ್ಯರ ಬೇಡಿಕೆ ಈಡೇರಿಸಿ ನೆಮ್ಮದಿ ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಸರಕಾರ ಅಧಿಕಾರದ ಅಹಂಕಾರದಿಂದ ಎಲ್ಲ ವರ್ಗದ ಮೇಲೆ ಗದಾಪ್ರಹಾರ ನಡೆಸಲು ಆರಂಭಿಸಿತು. ವಾಲ್ಮೀಕಿ ನಿಗಮದ ದೊಡ್ಡ ಹಗರಣದಲ್ಲಿ ಶಾಸಕ ನಾಗೇಂದ್ರ ರಾಜೀನಾಮೆ ನೀಡುವಂತಾಯಿತು. ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಕೈ ಬದಲಾಯಿತು ಎಂದು ರಾಜ್ಯವೇ ಬೆಚ್ಚಿ ಬೀಳಿತು . ಅಧಿಕಾರ ಶಾಹಿಯನ್ನು ಬಳಸಿ ಅಧಿಕಾರದ ವ್ಯಕ್ತಿಗಳನ್ನು ಕೂಡ ಬಲಿಪಶು ಮಾಡಿ ಹಣ ಸಂಗ್ರಹ ದಂಧೆಗೆ ಸರಕಾರ ತೊಡಗಿದ್ದಕ್ಕೆ ಈ ಹಗರಣ ನಿದರ್ಶನವಾಯಿತು ಎಂದರು,
ಅಹಿಂದ ಚಳವಳಿ ಹುಟ್ಟು ಹಾಕಿದ ಹಮ್ಮಿನಿಂದ ಮೆರೆಯುತ್ತಿರುವ ಸಿಎಂ ಸ್ವತಃ ಭೂ ಹಗರಣದಲ್ಲಿ ಸಿಲುಕಿಕೊಂಡರು. ನಾಚಿಕೆಗೇಡು ಪರಿಸ್ಥಿತಿ ನಿರ್ಮಾಣವಾಯಿತು. ಸೈಟ್ ಹಗರಣದಲ್ಲಿ ಸಿಲುಕಿ ಒದ್ದಾಾಡಿದರು. ಆದರೆ ಅದರಿಂದ ತಪ್ಪಿಸಿಕೊಳ್ಳಲು ತನ್ನ ಚಾಣಾಕ್ಷತನದಿಂದ ಪತ್ನಿ ಹೆಸರು ಬಲಿ ಕೊಟ್ಟರು. ದಾಖಲೆಗಳನ್ನು ಬದಲಾಯಿಸಿ ಹಗರಣದಿಂದ ಪಾರಾಗಲು ಪ್ರಯತ್ನಿಸಿದ್ದಾಾರೆ. ಅನಂತರವೂ ಅನೇಕ ಪ್ರಕರಣಗಳು ನಡೆದಿವೆ ಎಂದರು
ಆರ್ಸಿಬಿ ವಿಜಯೋತ್ಸವವನ್ನು ಪ್ರಚಾರದ ತೆವಳಿಗಾಗಿ ಅನಗತ್ಯವಾಗಿ ಕ್ರೀಡಾಭಿಮಾನಿಗಳನ್ನು ಹುಚ್ಚೆಬ್ಬಿಸಿ ಯಾವುದೇ ವ್ಯವಸ್ಥೆ ಮಾಡದೆ ರಾಜ್ಯದ ರಾಜಧಾನಿಗೆ ಕ್ರೀಡಾಭಿಮಾನಿಗಳನ್ನು ಆಹ್ವಾಾನಿಸಿ ಪೊಲೀಸರ ಸಲಹೆ ನಿರ್ಲಕ್ಷಿಸಿ ಅವರಿಗೆ ನಿಯಂತ್ರಣಕ್ಕೆ ಅವಕಾಶ ನೀಡದೆ ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡಿ ಕಾಲ್ತುಳಿತಕ್ಕೆ ಅಮಾಯಕ ಕ್ರೀಡಾಭಿಮಾನಿಗಳನ್ನು ಬಲಿ ಕೊಟ್ಟದ್ದು ದೇಶದ ಅತ್ಯಂತ ಹೀನ ಕೃತ್ಯ. ಅನಂತರ ದಕ್ಷ ಪೊಲೀಸ್ ಅಧಿಕಾರಿಯನ್ನು ಬಲಿಕೊಟ್ಟು ಅಧಿಕಾರ ಉಳಿಸಿಕೊಂಡರು. ಪೊಲೀಸರ ನೈತಿಕ ಬಲ ಕುಗ್ಗಿಸುವ ಕೆಲಸ. ತಮ್ಮ ತಪ್ಪು ಮರೆಮಾಚಿದರು ಎಂದು ಆಕ್ರೋಶ ಹೊರಹಾಕಿದರು.
ಇದುವರೆಗೆನ ಸರಕಾರದಲ್ಲಿ ಅತ್ಯಂತ ಹೆಚ್ಚು ಭ್ರಷ್ಟ ಸರಕಾರ ಈಗಿನ ಕಾಂಗ್ರೆೆಸ್ ಸರಕಾರ . ಕಂದಾಯ ಸಚಿವರು ತಾಲೂಕು ಕಚೇರಿಗೆ ಭೇಟಿ ನೀಡಿ ಅಲ್ಲಿ ಭ್ರಷ್ಟಾಾಚಾರ ನಡೆಯುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿದ್ದಾಾರೆ. ರಾಜು ಕಾಗೆ ಹಣವಿಲ್ಲದೆ ಯಾವುದೇ ಕೆಲಸ ಆಗುತ್ತಿಲ್ಲ. ಭ್ರಷ್ಟಾಾಚಾರ ತುಂಬಿದೆ ಎಂದಿದ್ದಾರೆ. ಬಿ.ಆರ್.ಪಾಟೀಲ್ ವಸತಿ ಇಲಾಖೆಯಲ್ಲಿ ಲಂಚ ಕೊಡದೆ ಮನೆ ಸಿಗುವುದಿಲ್ಲ ಹೇಳುತ್ತಿದ್ದಾಾರೆ. ಹೀಗೆ ಕಾಂಗ್ರೆಸ್ ಮುಖಂಡರೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎನ್ನುತ್ತಿದ್ದಾಾರೆ ಎಂದರು.
ದ.ಕ ಜಿಲ್ಲೆೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಂದು ಶಾಲೆ, ಒಂದು ಸೇತುವೆ, ರಸ್ತೆ, ಆಸ್ಪತ್ರೆೆ ನಿರ್ಮಾಣವಾಗಿಲ್ಲ. ರಾಜ್ಯದಲ್ಲಿ ಪ್ರಗತಿದಾಯಕ ಕೆಲಸ ಕಾರ್ಯಗಳು ನಡೆದಿಲ್ಲ.ದ.ಕ ಜಿಲ್ಲೆಯಲ್ಲಿ ಗಲಭೆ, ಹಿಂಸೆ, ದುರ್ಮರಣವಾಗಿದೆ. ತುಷ್ಟೀಕರಣದ ನೀತಿ ಅನುಸರಿಸಿದೆ. ಜಿಲ್ಲೆೆಯಲ್ಲಿ ಕೋಮು ಗಲಭೆಗಳಿಲ್ಲ. ಗಲಭೆಗಳಿವೆ. ಅದಕ್ಕೆೆ ಪೂರಕವಾಗಿ ತುಷ್ಟೀಕರಣ ನೀತಿಯಿಂದ ದ್ವೇಷ ಭಾವನೆ ಉಂಟಾಗಿದೆ. ಇದುವರೆಗೆ ಅದು ಮನಸ್ಸಿನಲ್ಲಿ ಬೇಧಭಾವ ಹುಟ್ಟಿಸಿದ ಕಾರಣದಿಂದ ಗಲಭೆ ಆಗುತ್ತಿದೆ. ಅವರು ಹುಟ್ಟು ಹಾಕಿದ ವಿಷಬೀಜ. ಒಂದು ಸಮುದಾಯದ ಪರವಾಗಿ ಇದ್ದೇವೆ ಎಂದು ತೋರಿಸಿಕೊಡುತ್ತಿದೆ. ಆದರೆ ಏನನ್ನೂ ನೀಡುತ್ತಿಲ್ಲ ಎಂದರು,