ಕಾರ್ಕಳ, ಜು. 02 (DaijiworldNews/AA): ಸುಲಭವಾಗಿ ಹಣ ಗಳಿಸುವ ಆಮಿಷವೊಡ್ಡಿ, ಟೆಲಿಗ್ರಾಮ್ ಮೂಲಕ ಪಾರ್ಟ್ ಟೈಂ ಕೆಲಸ ನೀಡುವುದಾಗಿ ನಂಬಿಸಿ 1.45 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.

ಹಿರ್ಗಾನ ಗ್ರಾಮದ ಕೀರ್ತನಾ (25) ವಂಚನೆಗೊಳಗಾದ ಯುವತಿ.
ಯುವತಿಯ ಮೊಬೈಲ್ಗೆ ಟೆಲಿಗ್ರಾಮ್ ಆ್ಯಪ್ನಲ್ಲಿ ಸಂದೇಶ ಒಂದರ ಲಿಂಕ್ ಬಂದಿದೆ. ಲಿಂಕ್ ತೆರೆದಾಗ ಮನೆಯಿಂದಲೇ ಮಾಡುವ ಪಾರ್ಟ್ ಟೈಂ ಕೆಲಸದ ಬಗ್ಗೆ ಮಾಹಿತಿ ಇತ್ತು. ಮೊದಲು 1,000 ರೂ. ಹೂಡಿಕೆ ಮಾಡುವಂತೆ ತಿಳಿಸಲಾಗಿತ್ತು. ಕೀರ್ತನಾ ಅವರು ತಮ್ಮ ಬ್ಯಾಂಕ್ ಖಾತೆಯಿಂದ 1,000 ರೂ. ಕಳುಹಿಸಿದ್ದಾರೆ. ಇದರಿಂದ ಅವರಿಗೆ 3,000 ರೂ. ಹಣ ನೀಡಿದ್ದಾರೆ. ಅದೇ ರೀತಿ ಹೆಚ್ಚು ಹೂಡಿಕೆ ಮಾಡುವಂತೆ ಕೀರ್ತನಾ ಅವಳಿಗೆ ಮಾಹಿತಿ ನೀಡಿದ್ದಾರೆ. ಹಂತ ಹಂತವಾಗಿ 1.45 ಲಕ್ಷ ರೂ. ಹಣವನ್ನು ನಿತ್ಯಾ ಪೊನ್ನುಮಣಿ ಎಂಬ ಹೆಸರಿನ ಖಾತೆಗೆ ಸ್ಕ್ಯಾನ್ ಮಾಡಿ ಪಾವತಿಸಿದ್ದಾರೆ.
ಕೀರ್ತನಾ ಅವರು ಕಳುಹಿಸಿದ ಹಣ ಅದರ ಲಾಭಾಂಶವಾಗಲೀ ವಾಪಸ್ ನೀಡದೆ ವಂಚನೆ ಮಾಡಲಾಗಿದೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.