ಕಾಸರಗೋಡು, ಜು. 03 (DaijiworldNews/TA): ಗಲ್ಫ್ ಉದ್ಯೋಗಿಯ ಮನೆಯಿಂದ ಸಿ.ಸಿ ಟಿ ವಿ ಕ್ಯಾಮರಾ, ಹಾರ್ಡ್ ಡಿಸ್ಕ್ ಸೇರಿದಂತೆ ಸುಮಾರು 50 ಸಾವಿರ ರೂ . ಮೌಲ್ಯದ ಸಾಮಾಗ್ರಿಗಳನ್ನು ಕಳವುಗೈದ ಘಟನೆ ಮಂಜೇಶ್ವರದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.




ಒಂದು ವರ್ಷದ ಹಿಂದೆ ಇದೇ ಮನೆಯಿಂದ ಕಳವು ನಡೆದಿತ್ತು. ಮಂಜೇಶ್ವರ ಠಾಣಾ ವ್ಯಾಪ್ತಿಯ ಮಚ್ಚ೦ಪಾಡಿಯ ಇಬ್ರಾಹಿಂ ಖಲೀಲ್ ರವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಎರಡನೇ ಅಂತಸ್ತಿನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಪಾಟನ್ನು ಮುರಿದು , ವಸ್ತ್ರಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಮನೆಯ ಸಿ.ಸಿ. ಟಿ ವಿ ಕ್ಯಾಮರಾಗಳು , ಹಾರ್ಡ್ ಡಿಸ್ಕ್ ಮೊದಲಾದವುಗಳನ್ನು ಕಳವು ಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇಬ್ರಾಹಿಂ ಖಲೀಲ್ ಸೋಮವಾರ ಗಲ್ಫ್ ನಿಂದ ಊರಿಗೆ ಹೊರಟಿದ್ದು , ಈ ನಡುವೆ ಮೊಬೈಲ್ ನಲ್ಲಿ ಸಿ.ಸಿ ಟಿ.ವಿ ಕ್ಯಾಮರಾ ದ್ರಶ್ಯಗಳನ್ನು ಗಮನಿಸಿದಾಗ ಸಂಪರ್ಕ ಕಡಿದಿತ್ತು .
ಮಂಗಳವಾರ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಒಂದು ವರ್ಷದ ಹಿಂದೆ ಇದೇ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಬಾಗಿಲು ಮುರಿದ ಕಳ್ಳರು 9 ಲಕ್ಷ ರೂ . ಹಾಗೂ ಹಾಗೂ ಐದೂವರೆ ಪವನ್ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಬೈಕ್ ನಲ್ಲಿ ಬಂದಿದ್ದ ಕಳ್ಳರು ನಗ ನಗದು ಕಳವುಗೈದು ಪರಾರಿಯಾಗುತ್ತಿರುವ ದೃಶ್ಯಗಳು ಪೊಲೀಸರಿಗೆ ಲಭಿಸಿತ್ತು.