ಮಂಗಳೂರು, ಜು. 06 (DaijiworldNews/AA): ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ. ರೋಡ್ ಶಾಖೆಯ ದರೋಡೆ ನಡೆದು ಸುಮಾರು ಐದೂವರೆ ತಿಂಗಳ ನಂತರ, ದರೋಡೆಕೋರರಿಂದ ವಶಪಡಿಸಿಕೊಂಡ 13.5 ಕೋಟಿ ರೂ. ಮೌಲ್ಯದ ಸುಮಾರು 18.306 ಕೆಜಿ ಚಿನ್ನಾಭರಣಗಳನ್ನು ನ್ಯಾಯಾಲಯದ ಆದೇಶದಂತೆ ಬ್ಯಾಂಕ್ ಕೆ.ಸಿ ರೋಡ್ ಶಾಖೆಯ ಮ್ಯಾನೇಜರ್ ಮತ್ತು ಗೋಲ್ಡ್ ಅಪ್ರೈಸರ್ ಸಮ್ಮುಖದಲ್ಲಿ ಮಂಗಳೂರು ಪೊಲೀಸ್ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ.

ಕಾಡು ಹಗಲೇ ರಿವಾಲ್ವರ್ ತೋರಿಸಿ ಚಿನ್ನಾಭರಣ ಮತ್ತು ನಗದನ್ನು ಮುಂಬೈ ಮೂಲದ ತಮಿಳುನಾಡು ಕಳ್ಳರ ತಂಡವೊಂದು ದೋಚಿತ್ತು. ನಂತರ ದರೋಡೆಕೋರರು ತಮಿಳುನಾಡಿನ ತಿರುನಲ್ವೇಲಿಗೆ ಪರಾರಿಯಾಗಿದ್ದರು.
ದರೋಡೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದ ಮಂಗಳೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಆರೋಪಿಗಳಾದ ತಮಿಳುನಾಡು ಮೂಲದ ಮುರುಗಂಡಿ ತೇವರ್ ಅಲಿಯಾಸ್ ಕುಮಾರ್, ಕಣ್ಣನ್ ಮಣಿ, ಎಂ. ಷಣ್ಮುಗ ಸುಂದರಂ ಸ್ಥಳೀಯ ಸಹಚರರಾದ ಶಶಿ ತೇವರ್ ಅಲಿಯಾಸ್ ಭಾಸ್ಕರ ಬೆಳ್ಚಪ್ಪಾಡ ಮತ್ತು ಮೊಹಮ್ಮದ್ ನಝೀರ್ನನ್ನು ಬಂಧಿಸಿದ್ದಾರೆ. ಜೊತೆಗೆ ದರೋಡೆ ಮಾಡಿದ ಚಿನ್ನಾಭರಣವನ್ನು ಅವರಿಂದ ವಶಪಡಿಸಿಕೊಳ್ಳಲಾಯಿತು.
ಸಂಪೂರ್ಣ ತನಿಖೆಯ ನಂತರ, ಪೊಲೀಸರು ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ. ಇದೀಗ ನ್ಯಾಯಾಲಯದ ನಿರ್ದೇಶನದಂತೆ, ವಶಪಡಿಸಿಕೊಂಡ 18.360 ಕೆಜಿ ಚಿನ್ನವನ್ನು ತೂಕ ಮಾಡಿ, ಬ್ಯಾಂಕ್ ಅಪ್ರೈಸರ್ ಅವರ ಸಮ್ಮುಖದಲ್ಲಿ ತೂಕ ಮಾಡಿ ಪೊಲೀಸರು ಚಿನ್ನಾಭರಣವನ್ನು ಹಸ್ತಾಂತರಿಸಿದ್ದಾರೆ.