ಉಳ್ಳಾಲ, ಜು. 17(DaijiworldNews/TA): ನಾಟೆಕಲ್ ಏರು ರಸ್ತೆಯಲ್ಲಿ ಮಂಜನಾಡಿ ಕಡೆಗೆ ಸಂಚರಿಸುವ ಬಸ್ ಏಕಾಏಕಿ ಬ್ರೇಕ್ ಫೈಲ್ ಆದ ಕಾರಣ ಹಿಮ್ಮುಖವಾಗಿ ಚಲಿಸಿದೆ. ಈ ಘಟನೆ ಬುಧವಾರ ರಾತ್ರಿ ತೊಕ್ಕೊಟ್ಟು ದೇರಳಕಟ್ಟೆ ಸಮೀಪದ ನಾಟೆಕಲ್ ಬಳಿ ಸಂಭವಿಸಿದೆ.

ಭಾರೀ ಮಳೆಯ ನಡುವೆ ಬಸ್ನ ಬ್ರೇಕ್, ಫೈಲ್ ಆಗಿ ಹಿಮ್ಮುಖ ಚಲಿಸಿ ನಡುರಸ್ತೆಯಲ್ಲಿ ಬಂದು ನಿಂತ ಕಾರಣ ಎರಡು ದ್ವಿಚಕ್ರ ವಾಹನಗಳು ಹಾಗೂ ಕಾರು ಜಖಂಗೊಂಡಿದೆ. ಈ ಸಂದರ್ಭದಲ್ಲಿ ಹಿಂದೆಯಿಂದ ಬರುತ್ತಿದ್ದ ವಾಹನ ಸವಾರರು ವಾಹನ ಬಿಟ್ಡು ಓಡಿದ ಪರಿಣಾಮ ಯಾವುದೇ ಜೀವಾಪಾಯ ಸಂಭವಿಸಿಲ್ಲ.
ಎರಡು ದ್ವಿಚಕ್ರ ವಾಹನಗಳು ಹಾಗೂ ಕಾರು ಬಸ್ ನಡಿಗೆ ಬಿದ್ದಿವೆ. ಅದೃಷ್ಟವಶಾತ್ ಬಸ್ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ವಿಪರೀತ ಮಳೆಯ ಕಾರಣ ಬಹಳ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು ಎಂದು ತಿಳಿದುಬಂದಿದೆ.