ಕಾರ್ಕಳ, ಜು. 17(DaijiworldNews/TA): ಅದಾಯ ಗ್ರಾಮ ಪಮಚಾಯತ್ ಗೆ ತ್ಯಾಜ್ಯ ಕಾರ್ಕಳ ಪುರಸಭೆಗೆ. ಧನದಾಹಕಕ್ಕೆ ಒಳಗಾದ ಕೆಲ ಅಧಿಕಾರಿಗಳು ಪುರಸಭಾ ನಿಯಾಮಾವಳಿಗಳನ್ನು ಗಾಳಿಗೆ ತೂರಿ. ಜನಪ್ರತಿನಿಧಿಗಳ ಗಮನಕ್ಕೂ ವಿಚಾರವನ್ನು ತಾರದೆಯೇ ಆತುರದಲ್ಲಿ ಒಳವರಂಡಿ ಸಂಪರ್ಕ ಕಲ್ಪಿಸಲಾಗಿದೆ. ಇದರ ಹಿಂದಿರುವ ಶಕ್ತಿಯಾವುದು? ಯಾರ ಕೈವಾಡ? ಇದೆ. ಕುಕ್ಕುಂದೂರಿನ ಜೋಡುರಸ್ತೆ, ಸಾಣೂರಿನ ಬೈಪಾಸು, ಮಿಯ್ಯಾರಿನ ಕರಿಯಕಲ್ಲು ಮುಂತಾದ ಪ್ರದೇಶಗಳಲ್ಲಿರುವ ವ್ಯಾಪಾರ ಸಂರ್ಕೀಣಗಳ ಹೊಟೇಲ್, ಬಾರ್ಗಳ ತ್ಯಾಜ್ಯಗಳನ್ನು ಪುರಸಭೆಯ ಒಳಚರಂಡಿಗೆ ಹರಿಯ ಬಿಟ್ಟಿರುವುದು ಈ ಅವ್ಯವಸ್ಥೆಯಿಂದಾಗಿ ನಗರ ಪ್ರದೇಶದಲ್ಲಿ ಒಳಚರಂಡಿ ಸಮರ್ಕಕವಾಗಿಲ್ಲದೇ ಸಮಸ್ಸೆಯ ತಾಣವಾಗಿ ಮಾರ್ಪಟ್ಟಿದೆ. ಗ್ರಾಮ ಪಂಚಾಯತ್ಗಳ ಆ ಭಾಗಗಳನ್ನು ಪುರಸಭೆಯೊಂದಿಗೆ ವಿಲೀನಗೊಳಿಸಿ ಕಾರ್ಕಳ ನಗರ ಸಭೆಯನ್ನಾಗಿ ಮಾರ್ಪಡು ಮಾಡುವ ಅಗತ್ಯ ಇದೆ. ಆ ಮೂಲಕ ಆರ್ಥೀಕ ಕ್ರೋಡಿಕರಣಕ್ಕೂ ಕಾರಣವಾಗುತ್ತದೆ ಎಂದು ಹಿರಿಯ ಸದಸ್ಯ ಅಶ್ಪಕ್ ಅಹ್ಮದ್ ಹೇಳಿದರು. ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.


ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಮಳೆಗಾಲದಲ್ಲಿ ಚರಂಡಿ ಉಕ್ಕಿ ಹರಿಯುತ್ತದೆ. ಬೇಸಿಗೆಯಲ್ಲಿ ಇಲ್ಲ ಎನ್ನುವ ಅಧಿಕಾರಿಗಳ ವಾದ ಸರಿಯಲ್ಲ. ಒಳಚರಂಡಿ ಯೋಜನೆಯ ಅನುಷ್ಟಾನದಲ್ಲಿ ಆಗಿರುವ ಲೋಪವೇ ಈ ಅವ್ಯವಸ್ಥೆಗೆ ಕಾರಣ ಎಂದರು. ಒಳಚರಂಡಿ ಅವ್ಯವಸ್ಥೆಯಿಂದ ಕಾಬೆಟ್ಟು ನಿವಾಸಿಗಳಿಗೆ ವಾಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೆಹಮತ್ ಎನ್.ಶೇಖ್ ದೂರಿದರು. ಪುರಸಭೆ ವ್ಯಾಪ್ತಿಯ ನಿವಾಸಿಗಳಿಗೆ ಸಮರ್ಪಕವಾಗಿ ಯೋಜನೆ ತಲುಪದ ನಡುವೆ ಗ್ರಾ.ಪಂ.ಗಳಿAದ ತ್ಯಾಜ್ಯ ನೀರಿನ ಜೋಡಣೆ ಸರಿಯಲ್ಲ ಎಂದು ಸದಸ್ಯರಾದ ನಳಿನಿ ವಿ.ಆಚಾರ್ಯ ಮತ್ತು ಪ್ರತಿಮಾ ರಾಣೆ ಆರೋಪಿಸಿದರು. ಕಳೆದ 30 ವರ್ಷಗಳ ಹಿಂದೆ ನಿರ್ಮಾಣವಾದ ಒಳಚರಂಡಿ ಯೋಜನೆ ಸಂದರ್ಭ ಒಂದೆರಡು ಕಡೆಗಳಲ್ಲಿ ಮ್ಯಾನ್ಹೋಲ್ಗಳು ಉಕ್ಕಿ ಹರಿಯುತ್ತಿತ್ತು. ಆದರೆ ಪ್ರಸ್ತುತ ನಡೆದ ಹೊಸ ಯೋಜನೆ ಅನುಷ್ಟಾನದ ಬಳಿಕ ಹೆಚ್ಚಿನ ಮ್ಯಾನ್ಹೋಲ್ಗಳಲ್ಲಿ ನೀರು ಉಕ್ಕುತ್ತಿದೆ. ವೆಂಕಟರಮಣ ದೇವಳದ ಬಳಿ ತ್ಯಾಜ್ಯ ನೀರು ಹೊರಬರುತ್ತಿದ್ದು, ಭಕ್ತಾದಿಗಳಿಗೂ ತೊಂದರೆಯಾಗುತ್ತಿದೆ. ಇದಕ್ಕೆ 13 ಕೋಟಿ ರೂ. ವೆಚ್ಚದ ಕಳಪೆ ಕಾಮಗಾರಿಯೇ ಕಾರಣ ಎಂದು ಶುಭದ ರಾವ್ ದೂರಿದರು. ಒಳಚರಂಡಿ ಯೋಜನೆಯ ಸಮಸ್ಯೆಯ ಬಗ್ಗೆ ಸಂಬAಧಿಸಿದ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ, ಯಾವ ನ್ಯಾಯವನ್ನೂ ಅವರು ಒದಗಿಸುತ್ತಿಲ್ಲ ಎಂದು ವಿವೇಕಾನಂದ ಶೆಣೈ ಆರೋಪಿಸಿದರು. ಅಧ್ಯಕ್ಷ ಯೋಗೀಶ್ ದೇವಾಡಿಗ ಮಾತನಾಡಿ, ಒಳಚರಂಡಿಗೆ ಸಂಪರ್ಕ ಕಲ್ಪಿಸಲಾದ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು. ಯಾವ ಕಟ್ಟಡಗಳಿಂದ ಅನುಮತಿ ಪಡೆದು ಸಂಪರ್ಕ ಕಲ್ಪಿಸಲಾಗಿದೆ ಎಂಬ ಬಗ್ಗೆಯೂ ಮಾಹಿತಿ ಪಡೆಯಬೇಕು. ಪ್ರತ್ಯೇಕ ತಂಡ ರಚಿಸಿ ಅನಧಿಕೃತ ಜೋಡಣೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಪುರಾತತ್ವ ಇಲಾಖೆಯಿಂದ ತೊಂದರೆ: ಪ್ರಾಕೃತಿಕ ವಿಕೋಪದಡಿಯಲ್ಲಿ ಬಿದ್ದ ಮನೆಗಳನ್ನು ದುರಸ್ತಿಪಡಿಸುವಲ್ಲಿಯೂ ಪುರಾತತ್ವ ಇಲಾಖೆ ಅಡ್ಡಿಪಡಿಸುತ್ತಿದೆ. ಪರವಾನಿಗೆ ಪಡೆಯುವಲ್ಲಿ 3-4 ತಿಂಗಳು ಕಾಯುವ ಪರಿಸ್ಥಿತಿ ಇದೆ ಎಂದು ಪ್ರದೀಪ್ ಮಾರಿಗುಡಿ ಆರೋಪಿಸಿದರು. ಕಟ್ಟಡ ನಿರ್ಮಾಣದ ವೇಳೆ ತಡೆಹಿಡಿಯುವ ಅಧಿಕಾರಿಗಳು ಅನಂತಶಯನದ ಬಳಿ ಇರುವ ಒಳಚರಂಡಿಯನ್ನು ಮುಚ್ಚಿ ಹಾಕಿದ್ದಾರೆ. ಅವರಿಗೆ ಯಾವ ಕಾನೂನು ಅನ್ವಯಿಸುವುದಿಲ್ಲವೇ ಎಂದು ವಿನ್ನಿಬೋಲ್ಡ್ ಮೆಂಡೋನ್ಸ ಪ್ರಶ್ನಿಸಿದರು. ಅಶ್ಪಕ್ ಅಹ್ಮದ್, ಹರೀಶ್ ಕುಮಾರ್ ಮುಂತಾದ ಸದಸ್ಯರು ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷ ಯೋಗೀಶ್ ದೇವಾಡಿಗ ಮಾತನಾಡಿ, ಪುರಸಭೆ ವ್ಯಾಪ್ತಿಯ ಪುರಾತತ್ವ ಇಲಾಖೆಯಡಿ ಬರುವ ನಾಲ್ಕು ಪ್ರಮುಖ ಸ್ಥಳಗಳ ಸುತ್ತಮುತ್ತಲ ತಮ್ಮ ವ್ಯಾಪ್ತಿಯನ್ನು ಮೊದಲು ಗುರುತಿಸಿಕೊಳ್ಳಿ. ಬಳಿಕ ಕ್ರಮ ಕೈಗೊಳ್ಳಿ ಎಂದರು.
ರಸ್ತೆ ಅವ್ಯವಸ್ಥೆ: ಅಮೃತ ಯೋಜನೆಯಡಿಯಲ್ಲಿ ಪುರಸಭೆ ವ್ಯಾಪ್ತಿಯ ರಸ್ತೆಗಳನ್ನು ಅಗೆದು ಹಾಕಲಾಗಿದ್ದು, ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿರುತ್ತದೆ. ಜನತೆಗೆ ನಮ್ಮಿಂದ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಮಾ ರಾಣೆ ಆರೋಪಿಸಿದರು. ಕಳೆದ ಸಾಮಾನ್ಯ ಸಭೆಯಲ್ಲಿ ತಿಳಿಸಿದಂತೆ ಈ ಬಗ್ಗೆ ಸಮರ್ಪಕವಾದ ಕ್ರಮ ಕೈಗೊಂಡಿಲ್ಲ ಎಂದು ಪ್ರದೀಪ್ ಮಾರಿಗುಡಿ ದೂರಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಆಗ್ರಹಿಸಿದರು. ಅಶ್ಪಕ್ ಅಹ್ಮದ್ ಮಾತನಾಡಿ ಪ್ಯಾಚ್ವರ್ಕ್ ನಡೆಸಿದ ರಸ್ತೆಗಳು ಮೂರು ತಿಂಗಳಲ್ಲೇ ತೆರೆದುಕೊಂಡಿರುವ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದರು. ಪ್ಯಾಚ್ವರ್ಕ್ ಸಂಬಂಧಿಸಿದಂತೆ ಯಾವುದೇ ಬಿಲ್ಲನ್ನು ಗುತ್ತಿಗೆದಾರರಿಗೆ ಪಾವತಿಸಿಲ್ಲ ಎಂದು ಅಧ್ಯಕ್ಷ ಯೋಗೀಶ್ ದೇವಾಡಿಗ ತಿಳಿಸಿದರು. ಅವರ ಬಿಲ್ಲನ್ನು ತಡೆಹಿಡಿಯುವಂತೆ ವಿವೇಕಾನಂದ ಶೆಣೈ ಒತ್ತಾಯಿಸಿದರು. ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.