ಉಡುಪಿ, ಜೂ25(Daijiworld News/SS): ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆಂಬುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಯವರ ಆದೇಶದಂತೆ ಕೋಟ ಪೊಲೀಸರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ, ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಬೇಳೂರು ಗ್ರಾಮದ ಶಿಲೆ ಕಲ್ಲು ಕೋರೆ ಬಳಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದರು. ಬಂಧಿತರನ್ನು ಗಣೇಶ್, ಸುದೀಪ್ ಶೆಟ್ಟಿ, ಮಹೇಶ್, ಮಣಿಕಂಠ, ಶಬರೀಶ, ಬಾಲಕೃಷ್ಣ, ಮಣಿಕಂಠ, ರಾಮಚಂದ್ರ, ರವಿ, ಗಣೇಶ್ ಮೊಗೇರ, ಸುರೇಶ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಜುಗಾರಿ ಆಟಕ್ಕೆ ಬಳಸಿದ 3090ರೂ. ನಗದು, 9 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ.ಕ ಸೇರಿದಂತೆ ಉಡುಪಿಯಲ್ಲಿ ಅಕ್ರಮ ಜುಗಾರಿ ಕೇಂದ್ರಗಳು ಹೆಚ್ಚುತ್ತಿದ್ದು, ಪೊಲೀಸರು ದಿನನಿತ್ಯಾ ಅಕ್ರಮ ಜುಗಾರಿ ಅಡ್ಡೆಗಳಿಗೆ ದಾಳಿ ನಡೆಸಿ ಹಲವರನ್ನು ಬಂಧಿಸಿ ಲಕ್ಷಾಂತರ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಂಡು ಬರುತ್ತಿರುವ ಘಟನೆಗಳು ವರದಿಯಾಗುತ್ತಲೇ ಇದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.