ಮಂಗಳೂರು, ಜು. 22 (DaijiworldNews/AA): ಮಂಗಳೂರಿನ ಯುವ ಉದ್ಯಮಿ ಹೋಟೆಲ್ ಹಾಗೂ ಇನ್ನಿತರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ನಿತಿನ್ ಸುವರ್ಣ ಅವರು ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿಜೆಪಿ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಿತಿನ್ ಅವರು ಹಲವು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಅವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
ಮೂಲತಃ ಮರೋಳಿ ನಿವಾಸಿಯಾದ ನಿತಿನ್ ಅವರು ಮಣ್ಣಗುಡ್ಡ ಬಳಿಯ ಗುಂಡೂರಾವ್ ಲೇನ್ ಬಳಿ ಫ್ಲಾಟ್ ನಲ್ಲಿ ತಾಯಿ ಜೊತೆ ನೆಲೆಸಿದ್ದರು. ಘಟನಾ ಸ್ಥಳಕ್ಕೆ ಬರ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.