ಮಂಗಳೂರು, ಜು. 22 (DaijiworldNews/AK): ವರ್ಟೆಕ್ಸ್ ಮ್ಯಾನೇಜ್ ವರ್ಕ್ಸ್ಪೇಸ್ ವತಿಯಿಂದ ಯಶಸ್ವಿ ಸ್ವದೇಶಿ ಐಟಿ ಉದ್ಯಮಗಳಲ್ಲಿ ಒಂದಾದ ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರೊಂದಿಗೆ 'ದಿ ನೋವಿಗೋ ಸ್ಟೋರಿ' ಎಂಬ ಶೀರ್ಷಿಕೆಯಲ್ಲಿ ಸಂವಾದ ಕಾರ್ಯಕ್ರಮ ಜು.18ರಂದು ಬಿಜಯ್-ಕಾಪಿಕಾಡ್ನ ಅಜಂತಾ ಬಿಸಿನೆಸ್ ಸೆಂಟರ್ನಲ್ಲಿ ಜರುಗಿತು.










ವರ್ಟೆಕ್ಸ್ ಮ್ಯಾನೇಜ್ ವರ್ಕ್ಸ್ಪೇಸ್ನ ವ್ಯವಸ್ಥಾಪಕ ಪಾಲುದಾರ ಗುರುದತ್ತ ಶೆಣೈ ಅವರು 'ಜಾಗತಿಕ ತಂತ್ರಜ್ಞಾನ ಶ್ರೇಷ್ಠತೆಯಲ್ಲಿ ಮಂಗಳೂರಿನ ದಾರಿದೀಪವಾಗಿ ನೋವಿಗೊ ಸೊಲ್ಯೂಷನ್ಸ್' ಎಂಬ ವಿಷಯದ ಬಗ್ಗೆ ಸಂವಾದ ನಡೆಸಿಕೊಟ್ಟರು. ಉದ್ಯಮಶೀಲತೆ, ಸ್ಥಳೀಯ ಪ್ರತಿಭೆ ಮತ್ತು ದೂರದೃಷ್ಟಿಯ ಚಿಂತನೆಗೆ ಕಾರ್ಯಕ್ರಮದಲ್ಲಿ ವಿಶೇಷ ಒತ್ತು ನೀಡಲಾಗಿತ್ತು.
ನೋವಿಗೋ ಸೊಲ್ಯೂಷನ್ಸ್
2011 ರಲ್ಲಿ ಸ್ಥಾಪನೆಯಾದ ನೋವಿಗೊ ಸೊಲ್ಯೂಷನ್ಸ್ 900ಕ್ಕೂ ಹೆಚ್ಚು ಉದ್ಯೋಗಿಗಳು, ಭಾರತದಾದ್ಯಂತ ಐದು ಕಚೇರಿಗಳು ಮತ್ತು ಯುಎಸ್ಎ, ಯುಕೆ, ಯುಎಇ, ನೆದರ್ಲ್ಯಾಂಡ್ಸ್, ಸೌದಿ ಅರೇಬಿಯಾ ಮತ್ತು ಸಿಂಗಾಪುರದಲ್ಲಿ 30ಕ್ಕೂ ಹೆಚ್ಚು ಫ್ರೆಂಟ್ಗಳನ್ನು ಹೊಂದಿರುವ ಜಾಗತಿಕ ತಂತ್ರಜ್ಞಾನ ಕಂಪೆನಿಯಾಗಿ ಯಶಸ್ವಿಯಾಗಿದೆ. ಸರಾಸರಿ ಶೇ.35 ವಾರ್ಷಿಕ ಬೆಳವಣಿಗೆಯ ದರವನ್ನು ಹೊಂದಿರುವ ನೋವಿಗೊ ಜಾಗತಿಕ ಮಟ್ಟದಲ್ಲಿ ಭದ್ರವಾಗಿ ನೆಲೆವೂರುವತ್ತ ದೃಢ ಹೆಜ್ಜೆಯನ್ನಿಟ್ಟಿದೆ.
ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರವೀಣ್ ಕುಮಾರ್ ಕಲ್ಯಾವಿ, ಆರಂಭಿಕ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಮೂರು ಕ್ರಿಯಾತ್ಮಕ ಸಹ-ಸಂಸ್ಥಾಪಕರೊಂದಿಗೆ ಉದ್ಯಮಿಯಾಗಿ ಟೆಕ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದು ಮತ್ತು ಆರಂಭದಲ್ಲಿ ಬಾಹ್ಯ ನಿಧಿ ಇಲ್ಲದೆ, ಉದ್ಯಮ ಆರಂಭಿಸಿರುವುದನ್ನು ಮೆಲುಕು ಹಾಕಿದರು. ದುಬೈಗೆ ಹೋಲಿಸಿದರೆ ಅಮೆರಿಕ ಹೆಚ್ಚು ಸರ್ಧಾತ್ಮಕ ಮಾರುಕಟ್ಟೆಯಾಗಿದೆ. ಆದರೂ, ನಮ್ಮ ಪ್ರಯಾಣದ ಉದ್ದಕ್ಕೂ, ನಾವು ಬೇರೂರಿದ್ದೇವೆ ನಮ್ಮ ಉದ್ಯೋಗಿಗಳಲ್ಲಿ 50% ಮಂಗಳೂರಿನವರು ಇದ್ದಾರೆ ಎಚಿದರು.
ಸಹ-ಸಂಸ್ಥಾಪಕ ಮತ್ತು ಸಿಟಿಒ ಮೊಹಮ್ಮದ್ ಹನೀಫ್, ನಾವು ಅಪಾಯವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಮತೋಲಿತತೆಯನ್ನು ಒಟ್ಟಿಗೆ ತಂದಿದ್ದೇವೆ. ಈ ಸಂಯೋಜನೆಯು ನಮಗೆ ಫಲಿತಾಂಶ ನೀಡಿದೆ. ಮಧ್ಯಪ್ರಾಚ್ಯ ವಿಶೇಷವಾಗಿ ದುಬೈ, ನೋವಿಗೊಗೆ ಆರಂಭಿಕ ಬ್ರೇಕ್ ನೀಡಿತು. ಪ್ರತಿಯೊಂದು ಮಾರುಕಟ್ಟೆಗೂ ತನ್ನದೇ ಆದ ನಾಡಿಮಿಡಿತವಿದೆ. ಕಲಿಯುವುದು ಮತ್ತು ಹೊಂದಿಕೊಳ್ಳುವುದು ನಮ್ಮ ವಿಧಾನವಾಗಿತ್ತು. ಮಹತ್ವಾಕಾಂಕ್ಷೆ ಮತ್ತು ಶಿಸ್ತು ನಮಗೆ ಮಾರ್ಗದರ್ಶನ ನೀಡಿತು ಎಂದರು
ಸಹ-ಸಂಸ್ಥಾಪಕ ಮತ್ತು ಸಿಸಿಒ ಶಿಹಾಬ್ ಕಲಂದರ್ ಮಾತನಾಡಿ, ನೋವಿಗೊದ ಗುರುತು ಅದರ ಜನ್ಮಸ್ಥಳದೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಮಂಗಳೂರು ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ಮಂಗಳೂರಿನ ಕಂಪನಿಯಾಗಿ ಗುರುತಿಸಲ್ಪಟ್ಟಿದ್ದಕ್ಕೆ ನಮಗೆ ಹೆಮ್ಮೆ ಇದೆ. ನಮ್ಮ ಐವತ್ತು ಪ್ರತಿಶತ ಉದ್ಯೋಗಿಗಳು ಸ್ವದೇಶಿಯಾಗಿದ್ದಾರೆ ಮತ್ತು ನಾವು ಆ ಮಾನದಂಡವನ್ನು ಕಾಪಾಡಿಕೊಳ್ಳಲು ಉದ್ದೇಶಿಸಿದ್ದೇವೆ ಎಂದರು.
ನಾವು ಏಜೆಂಟಿಕ್ ಆಟೊಮೇಷನ್ನಲ್ಲಿ ಮುಂಚೂಣಿಯಲ್ಲಿದ್ದೇವೆ. ಯುವ ಪಾಥ್ ಫಾಸ್ಟ್-ಟ್ಯಾಕ್ ಪಾಲುದಾರರಾಗಿ, ಕನಿಷ್ಠ ಮಾನವ ಮೇಲ್ವಿಚಾರಣೆಯೊಂದಿಗೆ ಸಂಕೀರ್ಣ ಪ್ರಕ್ರಿಯೆಗಳಲ್ಲಿ ಕೊನೆಯವರೆಗೆ ನಿರ್ಧಾರಗಳನ್ನು ಕಾರ್ಯಗತಗೊಳಿಸಬಹುದಾದ ಸ್ವಾಯತ್ತ ಎಐ ಎಜೆಂಟ್ಗಳನ್ನು ನಾವು ನಿರ್ಮಿಸುತ್ತಿದ್ದೇವೆ. ಕಂಪನಿಯು ತನ್ನ ಆದಾಯದ ಶೇ.10.15 ಅನ್ನು ಸಂಶೋಧನೆ, ನಾವೀನ್ಯತೆ ಮತ್ತು ಹೊಸ ಸಾಮರ್ಥ್ಯಗಳಲ್ಲಿ ನಿರಂತರವಾಗಿ ಮರುಹೂಡಿಕೆ ಮಾಡುತ್ತದೆ ಎಂದು ಹೇಳಿದರು.
ಉದಯೋನ್ಮುಖರಿಗೆ ಗೌರವಾಭಿನಂದನೆ
ಈ ಕಾರ್ಯಕ್ರಮವು ಇಲ್ಲಿನ ಉದಯೋನ್ಮುಖ ಪ್ರತಿಭೆ ಮತ್ತು ನಾವೀನ್ಯತೆಯನ್ನು ಗುರುತಿಸಲಾಯಿತು.ಹ್ಯಾಂಗೋ ಐಸ್ ಕ್ರೀಂನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ. ಪೈ, ನೋವಿಗೋ ಸಂಸ್ಥಾಪಕರನ್ನು ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಂಗಳೂರು ಒಂದು ವಿಶಿಷ್ಟ ಉದ್ಯಮಶೀಲ ಸಂಸ್ಕೃತಿಯನ್ನು ಹೊಂದಿದೆ ಎಚಿದರು.
ಈ ಸಂದರ್ಭ ವರ್ಟೆಕ್ಸ್ ಸ್ಥಳೀಯ ನವೋದ್ಯಮ ಯಶಸ್ಸನ್ನು ಗೌರವಿಸಲಾಯಿತು. ಮುಂಚೂಣಿಯ ಉದಯೋನ್ಮುಖ ನವೋದ್ಯಮ-ಮಂಗಳೂರು: ಇಂಡಿಯಂಟಾ ಇ-ಮೊದಲಿಟಿ ಪೈ. ಲಿಮಿಟೆಡ್, ಸ್ಥಾಪಕ ಮತ್ತು ಸಿಇಒ ಡಾ. ಆರನ್ ಡಿಸೋಜ ಅವರ ಪರವಾಗಿ ತಂಡದ ಸದಸ್ಯರಾದ ವಸಂತಿ ಮತ್ತು ಶ್ರಾವ್ಯ ಪ್ರತಿನಿಧಿಸಿದರು. ಸ್ಪಾಟ್ ಲೈಟ್ ಆನ್ ಹೋಮ್ ಗೋನ್ ನವೋದ್ಯಮದಲ್ಲಿ ಆಪ್ಡಾಪ್ಸ್ ಸಿಎಸ್ಆರ್ ಪ್ರೈ.ಲಿ. ಸಹ-ಸಂಸ್ಥಾಪಕ ಮತ್ತು ಸಿಇಒ ಮಿಥುನ್ ಸುವರ್ಣ ಗೌರವ ಸ್ವೀಕರಿಸಿದರು.
3 ಸಾವಿರ ಕೋಟಿ ಐಟಿ ರಫ್ತು
ಮಂಗಳೂರು ಅನಾಲಿಟಿಕ್ಸ್ ಮತ್ತು ರಿಸರ್ಚ್ ಕನ್ನಲ್ಡಿಂಗ್ನ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕಿ ರೂಪಾ ಭಟ್ ಜಾಕೋಬ್ ಅವರ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.