ಬ್ರಹ್ಮಾವರ, ಜು. 23 (DaijiworldNews/AA): ಶಿರೂರು ಮೂರುಕೈ ಸಮೀಪದ ನೀರ್ಜೆಡ್ಡು ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.




ಹೈಕಾಡಿಯ ಮುಜಾಫಿರ್ ಮತ್ತು ನೀರ್ಜೆಡ್ಡಿನ ಕೃಷ್ಣ ನಾಯ್ಕ ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ಹೈಕಾಡಿಯ ಮೊಹಮ್ಮದ್ ಯಾಸಿನ್ ಪರಾರಿಯಾಗಿದ್ದಾನೆ.
ಮಂಗಳವಾರ ಸಂಜೆ, ಇಕೋ ನ್ಪೋರ್ಟ್ಸ್ ಕಾರಿನಲ್ಲಿ ಬಂದ ಮೂವರು ಆರೋಪಿಗಳು ರಸ್ತೆಯ ಬದಿಯಲ್ಲಿ ನಿಂತಿದ್ದ ಹಸುವನ್ನು ಬಲವಂತವಾಗಿ ಕಟ್ಟಿ ವಾಹನಕ್ಕೆ ತಳ್ಳುತ್ತಿದ್ದರು. ಈ ಘಟನೆಯನ್ನು ಗಮನಿಸಿದ ಬೈಕ್ನಲ್ಲಿ ಹಾದುಹೋಗುತ್ತಿದ್ದ ಸ್ಥಳೀಯರು ಅವರನ್ನು ಗಮನಿಸಿದ್ದಾರೆ. ಸ್ಥಳೀಯರನ್ನು ನೋಡಿದ ಮೊಹಮ್ಮದ್ ಯಾಸಿನ್ ಪರಾರಿಯಾದರೆ, ಮುಜಾಫಿರ್ ಹಸುವಿನೊಂದಿಗೆ ಗೋಳಿಯಂಗಡಿ ಕಡೆಗೆ ಕಾರು ಚಲಾಯಿಸಿದ್ದಾನೆ.
ಬೈಕ್ನಲ್ಲಿ ಬಂದವರು ಕಾರಿನ ನೋಂದಣಿ ಸಂಖ್ಯೆಯನ್ನು ಗಮನಿಸಿ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಮುಜಾಫಿರ್ನನ್ನು ವಾಹನ ಮತ್ತು ರಕ್ಷಿಸಲ್ಪಟ್ಟ ಹಸುವಿನೊಂದಿಗೆ ಹೈಕಾಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಮುಜಾಫಿರ್ ಮತ್ತು ಮೊಹಮ್ಮದ್ ಯಾಸೀನ್ ಮಾಂಸಕ್ಕಾಗಿ ಜಾನುವಾರುಗಳನ್ನು ಕದ್ದು, ಅವುಗಳನ್ನು ಸ್ಥಳೀಯ ನಿವಾಸಿ ಕೃಷ್ಣ ನಾಯಕ್ಗೆ ಪೂರೈಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.