ಬಂಟ್ವಾಳ, ಜು. 25 (DaijiworldNews/AA): ಸುಮಾರು ಎರಡು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಗೆ ಬಂಟ್ವಾಳ ಭಾಗದಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಶುಕ್ರವಾರ ನೇತ್ರಾವತಿ ನೀರಿನ ಮಟ್ಟ 6.9 ಮೀ. ತಲುಪಿದೆ.


ಬೆಳಗ್ಗೆಯಿಂದ ಮಳೆಯ ಪ್ರಮಾಣ ತುಸು ಕಡಿಮೆಯಾದಂತೆ ಕಾಣುತ್ತಿದ್ದು, ನಿನ್ನೆ ರಾತ್ರಿಯಿಡಿ ಗಾಳಿ ಮಳೆ ಆಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಕೂಡ ಈವರೆಗೆ ನೇತ್ರಾವತಿ ನದಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿಲ್ಲ.
ನೇತ್ರಾವತಿ ನದಿಗೆ ಅಲ್ಲಲ್ಲಿ ಆಡ್ಡವಾಗಿ ಚೆಕ್ ಡ್ಯಾಂಗಳು, ಡ್ಯಾಂಗಳು ನಿರ್ಮಾಣಗೊಂಡ ಕಾರಣದಿಂದ ನೀರಿನ ಹರಿಯುವ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಹಾಗಾಗಿ ನೆರೆಯ ಆತಂಕ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ.