ಬಂಟ್ವಾಳ, ಜು. 25 (DaijiworldNews/AA): ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಮೂವ ಗುರಿಮಜಲ್ ವಿಠ್ಠಲ್ ಪೂಜಾರಿ ಮನೆಗೆ ತಾಗಿಕೊಂಡಿದ್ದ ಬಚ್ಚಲು ಮನೆ ಸಂಪೂರ್ಣ ಹಾನಿಯಾದ ಘಟನೆ ನಡೆದಿದೆ.




ಘಟನಾ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ವಿಜಯ್ ಕುಮಾರ್, ಕುರಿಯಾಳ ಗ್ರಾಮದ ಗ್ರಾಮ ಕರಣಿಕ, ಪಂಚಾಯತ್ ಸದಸ್ಯರಾದ ದಿನೇಶ್, ಶ್ರೀದೇವಿ ರೂಪೇಶ್ ಕುಮಾರ್ ಹಾಗೂ ಪಂಚಾಯತ್ ಸಿಬ್ಬಂದಿ ಚೇತನ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದರು.