ಮಣಿಪಾಲ, ಜೂ 25 (Daijiworld News/MSP): 10 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ವಿಷವುಣಿಸಿ ಸಾಮೂಹಿಕವಾಗಿ ಹತ್ಯೆ ಮಾಡಿರುವ ಘಟನೆ ಮಣಿಪಾಲದ ಮಾಂಡವಿ ಎಮಿರಾಲ್ಡ್ ಕಟ್ಟಡ ಬಳಿ ನಡೆದಿದೆ. ಬೀದಿ ನಾಯಿಗಳ ಸಮಸ್ಯೆಯಿಂದ ಮುಕ್ತಿ ಕಾಣಲು ನಾಯಿಗಳ ಸಾಮೂಹಿಕ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಮೀನಿನಲ್ಲಿ ವಿಷ ಬೆರೆಸಿ ನಾಯಿಗಳಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ಇದನ್ನು ತಿಂದ ಹತ್ತಕ್ಕೂ ಹೆಚ್ಚು ನಾಯಿಗಳು ಸುರಿಯುವ ಮಳೆಯಲ್ಲಿ ಒದ್ದಾಡುತ್ತಾ ಪ್ರಾಣ ಬಿಟ್ಟಿವೆ.
ನಾಯಿಗಳ ಮಾರಣಹೋಮದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮಣಿಪಾಲ ಠಾಣೆಯಲ್ಲಿ ಪ್ರಾಣಿ ಪ್ರೇಮಿ ಬಬಿತಾ ಮಧ್ವರಾಜ್ ಎಂಬವರು ದೂರು ನೀಡಿದ್ದಾರೆ.