ಉಡುಪಿ, ಆ. 02 (DaijiworldNews/AK): ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ಎನ್ಐಎ ತನಿಖೆಗೆ ವಹಿಸುವ ಮೂಲಕ ಸುಹಾಸ್ ಸಾವಿಗೆ ನ್ಯಾಯ ನೀಡಿದೆ ಎಂದು ಎಮ್.ಎಲ್.ಸಿ. ಕಿಶೋರ್ ಕುಮಾರ್ ಹೇಳಿದ್ದಾರೆ.

ದ.ಕ ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಎನ್ಐಎ ದಾಳಿ ವಿಚಾರದ ಕುರಿತು ಮಾತನಾಡಿ, ಮತಾಂದರಿಂದ ಹತ್ಯೆಯಾದ ಸುಹಾಸ್ ಶೆಟ್ಟಿ ನನ್ನ ಆತ್ಮೀಯ ಮಿತ್ರ. ರಾಜ್ಯ ಬಿಜೆಪಿ ನಾಯಕರ ಮನವಿ ಮೇರೆಗೆ ಎನ್ ಐ ಎ ತನಿಖೆಗೆ ವಹಿಸಲಾಗಿದೆ . ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿ ಪುರಸ್ಕರಿಸಿ ಎನ್ಐಎ ತನಿಖೆಗೆ ಕೇಂದ್ರ ಸರಕಾರ ವಹಿಸಿದೆ ಎಂದರು.
ಎನ್ಐಎ ತನಿಖೆ ಮೂಲಕ ಸಾವಿಗೆ ಕೇಂದ್ರ ಸರಕಾರ ನ್ಯಾಯ ನೀಡಿದೆ. ಭಯೋತ್ಪಾದಕರ ನೆರಳು ಕರಾವಳಿಯಲ್ಲಿತ್ತು. ಈಗ ಕೇಂದ್ರ ಸರಕಾರದ ದೃಢ ನಿಲುವಿನಿಂದ ಕರಾವಳಿ ಸ್ವಚ್ಚವಾಗುತ್ತಿದೆ. ಕರಾವಳಿಯಲ್ಲಿ ಭಯೋತ್ಪಾದನಾ ಕೃತ್ಯ ನೆಲಸಮವಾಗಬೇಕಿದೆ ಎಂದು ಆಗ್ರಹಿಸಿದರು.