ಉಡುಪಿ,ಆ. 06 (DaijiworldNews/AK): ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಆಗಸ್ಟ್ 5 ರಂದು ಉಡುಪಿಯಲ್ಲಿ ಕೆಎಸ್ಆರ್ಟಿಸಿ ಬಸ್ ಸೇವೆಗಳಲ್ಲಿ ಮಂಗಳವಾರ ವ್ಯತ್ಯಯ ಕಂಡುಬಂತು.





ಉಡುಪಿ ಡಿಪೋದಿಂದ ಬಸ್ಸುಗಳು ಹೊರಟಿವೆಯಾದರೂ ಇತರ ಭಾಗದಿಂದ ಉಡುಪಿಗೆ ಬರುವ ಬಸ್ ಗಳಲ್ಲಿ ವ್ಯತ್ಯಯವಾಗಿದೆ. ಬೆರಳೆಣಿಕೆ ಬಸ್ ಗಳಿದ್ದ ಕಾರಣ ಆ ಬಸ್ ಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಂಡಿದ್ದರು.
ಭಟ್ಕಳದಿಂದ ಉಡುಪಿಗೆ ಬಸ್ಸುಗಳು ಬಂದಿಲ್ಲ.. ತಂಗುದಾಣದಲ್ಲಿ ಬೆಳಗ್ಗಿನ ಹೊತ್ತು ತುಸು ಪ್ರಯಾಣಿಕರು ಆಗಮಿಸಿದ್ದರಾದರೂ ಸಮಯಕ್ಕೆ ಸರಿಯಾಗಿ ಬಸ್ ಗಳು ಇಲ್ಲದ ಕಾರಣ ವಾಪಾಸು ಹಿಂತಿರುಗಿದ ಘಟನೆ ನಡೆಯಿತು.