ಮಂಗಳೂರು, ಆ. 06 (DaijiworldNews/AK): ಕೆ ಎಸ್ ಆರ್ ಟಿಸಿ ನೌಕರರ ವೇತನ ಪರಿಷ್ಕರಣೆ , ಬಾಕಿ ಎರಿಯರ್ ಪಾವತಿ ಸೇರಿದಂತೆ ಹಲವು ಬೇಡಿಕೆಗೆ ಆಗ್ರಹಿಸಿ ಇಂದು ಇಂದು ಆಗಸ್ಟ್ 5ರಂದು
ರಂದು ರಾಜ್ಯಾದ್ಯಂತ ನೌಕರರ ಬಂದ್ ಗೆ ಕರೆ ನೀಡಿದೆ.




ಆದರೆ ಮಂಗಳೂರು ವಿಭಾಗದಲ್ಲಿ ದಿನನಿತ್ಯದಂತೆ ಬಸ್ಗಳು ಸಂಚರಿಸುತ್ತಿವೆ. ಬಸ್ ಗಳು ವೇತನ ಪರಿಷ್ಕರಣೆ , ಬಾಕಿ ಎರಿಯರ್ ಪಾವತಿ ಬೇಡಿಕೆ ಮುಂದಿಟ್ಟು ಕರೆ ನೀಡಲಾಗಿರುವ ಕೆ ಎಸ್ ಆರ್ ಟಿಸಿ ನೌಕರರ ಬಂದ್ ಗೆ ಮಂಗಳೂರು ವಿಭಾಗದಲ್ಲಿ ಸೂಕ್ತ ಸ್ಪಂದನೆ ದೊರೆತಿಲ್ಲ ಎನ್ನಬಹುದು.
ಮಂಗಳೂರಿನ ಲಾಲ್ ಬಾಗ್ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಗಳು ಸಂಚರಿಸುತ್ತಿವೆ. ಅದೇ ರೀತಿ ಪ್ರಯಾಣಿಕರು ಸಹ ತಮ್ಮ ಊರಿನ ಬಸ್ ಗಾಗಿ ಕಾದು ಕುಳಿತಿದ್ದಾರೆ. ಬೇರೆ ಊರಿಗೆ ಹೋಲಿಸಿದರೆ ಮಂಗಳೂರಿನಲ್ಲಿ ದಿನನಿತ್ಯದ ಸಂಚಾರವೇ ಇಂದು ಸಹ ಮುಂದುವರಿದಿದೆ.