ಕಾಸರಗೋಡು, ಆ. 05 (DaijiworldNews/TA): ರೆಡ್ ಅಲರ್ಟ್ ಹಿನ್ನಲೆಯಲ್ಲಿ ನಾಳೆ (ಆಗಸ್ಟ್ 6) ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಇಂಪಾ ಶೇಖರ್ ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆಯ ಮುನ್ಸೂಚನೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ನೀಡಲಾಗಿದೆ. ಜಿಲ್ಲೆಯ ಶಾಲೆಗಳು, ಕಾಲೇಜು, ವೃತ್ತಿಪರ ಶಿಕ್ಷಣ ಸಂಸ್ಥೆಗಳು , ಕೇಂದ್ರೀಯ ವಿದ್ಯಾಲಯ, ಟ್ಯೂಷನ್ ಕೇಂದ್ರ, ಮದ್ರಸ, ,ಅಂಗನವಾಡಿ ಮೊದಲಾದವು ಗಳಿಗೆ ರಜೆ ಅನ್ವಯವಾಗಲಿದೆ. ವಿಶ್ವ ವಿದ್ಯಾನಿಲಯ, ವೃತ್ತಿಪರ ಕಾಲೇಜು ಹಾಗೂ ಇಲಾಖಾ ಮಟ್ಟದ ಪೂರ್ವ ನಿಗಧಿತ ಎಲ್ಲಾ ಪರೀಕ್ಷೆಗಳು ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.