ಕಾಸರಗೋಡು, ಆ. 05 (DaijiworldNews/TA): ಅಕ್ರಮ ಮರಳುಗಾರಿಕೆ ವಿರುದ್ಧ ಕುಂಬಳೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಕುಂಬಳೆ ಠಾಣಾ ವ್ಯಾಪ್ತಿಯ ಯಲ್ಲಿನ 25 ರಷ್ಟು ಅಕ್ರಮ ಅಡ್ಡೆಗಳಿಗೆ ದಾಳಿ ನಡೆಸಲಾಗಿದೆ.



ಮರಳುಗಾರಿಕೆಗೆ ಬಳಸುತ್ತಿದ್ದ ಹತ್ತು ದೋಣಿಗಳನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ಮರಳು ಮಾಫಿಯಾ ದಾಸ್ತಾನಿಟ್ಟಿದ್ದ 25 ಲೋಡ್ ಮರಳನ್ನು ಜೆಸಿಬಿ ನದಿಗೆ ತಳ್ಳಲಾಗಿದೆ. ಪೊದೆ ಹಾಗೂ ನಿರ್ಜನ ಸ್ಥಳಗಳಲ್ಲಿ ದಾಸ್ತಾನಿಡಲಾಗಿದ್ದ ಮರಳನ್ನು ಪೊಲೀಸ್ ಠಾಣೆ ಗೆ ತಲಪಿಸಲಾಗಿದೆ. ನದಿಯಿಂದ ಹೂಳೆತ್ತುವ ಮರಳನ್ನು ವಿವಿಧ ಸ್ಥಳಗಳಲ್ಲಿ ದಾಸ್ತಾನಿಟ್ಟಿರುವುದು ಪತ್ತೆ ಹಚ್ಚಲಾಗಿದೆ.
ಕುಂಬಳೆ ಠಾಣಾ ವ್ಯಾಪ್ತಿಗೆ ಬರುವ ಕುಂಬಳೆ ,ಪುತ್ತಿಗೆ, ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಗೆ ಬರುವ ಕಾರಣ ನದಿಗಳಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಕೆಲ ಪೊಲೀಸರು ಮರಳು ಮಾಫಿಯಾ ಜೊತೆ ಕೈ ಜೋಡಿ ಸಿದ್ದು, ಘಟನೆ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಕುಂಬಳೆ ಠಾಣೆ ಯಾವುದೇ ಆರು ಮಂದಿ ಪೊಲೀಸರು ವಾರದ ಹಿಂದೆ ಅಮಾನತು ಗೊಳಿಸಲಾಗಿತ್ತು. ಕುಂಬಳೆ ಠಾಣಾ ಸಬ್ ಇನ್ಸ್ ಪೆಕ್ಟರ್ ಕೆ.ಶ್ರೀಜೇಶ್ ನೇತೃತ್ವದ ತಂಡಕ್ಕೆ ಕೆಲವೊಂದು ಮಾಹಿತಿ ಲಭಿಸಿದ್ದು,ಇದರಂತೆ ಕಾರ್ಯಚರಣೆ ಚುರುಕುಗೊಳಿಸಿದ್ದಾರೆ.