ಬೆಳ್ತಂಗಡಿ, ಆ. 06 (DaijiworldNews/TA): ತಾಲೂಕಿನಲ್ಲಿ ಆ.5 ರಂದು ಸುರಿದ ಭಾರೀ ಮಳೆಗೆ ತೋಟತ್ತಾಡಿ ಗ್ರಾಮದ ದಡ್ಡು ಪ್ರದೇಶದಲ್ಲಿ ಪೆರ್ನಾಳ್ ಕೆರೆಯಿಂದಾಗಿ ಹರಿಯುವ ಹಳ್ಳದ ನೀರು ಉಕ್ಕಿ ಹರಿದ ಪರಿಣಾಮ ಅಕ್ಕಪಕ್ಕದ ತೋಟಕ್ಕೆ ನೀರು ನುಗ್ಗಿದೆ.

ತೋಟತ್ತಾಡಿ ಸರಕಾರಿ ಶಾಲೆಯಿಂದ ಮುಂದೆ ದಡ್ಡು ಮೂಲಕ ಬಸದಿ ಒಳ ರಸ್ತೆ ಇದ್ದು, ಇಲ್ಲಿ ನಿಲ್ಲಿಸಿದ್ದ ಸಮೀಪದ ಮನೆಯವರ ಕಾರು ತೇಲಿ ಹೋಗುವ ಸ್ಥಿತಿ ಉಂಟಾಗಿತ್ತು. ಇದನ್ನು ಗಮನಿಸಿದ ಮನೆಮಂದಿ ಕಾರನ್ನು ಹಗ್ಗದಲ್ಲಿ ಕಟ್ಟಿ ರಕ್ಷಿಸಿಕೊಂಡಿದ್ದಾರೆ. ಕಾರಿನೊಳಗೆ ನೀರು ನುಗ್ಗಿ ಹಾನಿಯಾಗಿದೆ.