ವಿಟ್ಲ, ಆ. 07 (DaijiworldNews/TA): ಅಕ್ರಮವಾಗಿ ಕೇರಳದಿಂದ ದ.ಕ. ಜಿಲ್ಲೆಗೆ ಕೆಂಪು ಕಲ್ಲು ಸಾಗಿಸುವ ವೇಳೆ ವಿಟ್ಲ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದೆ. ಕೆಂಪು ಕಲ್ಲು, ಲಾರಿ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.

ವಿಟ್ಲ ನಿವಾಸಿ ಮಹಮ್ಮದ್ ಮುಸ್ತಾಫ ಹಾಗೂ ಉಕ್ಕುಡ ನಿವಾಸಿ ಸಲಾಂ ಮತ್ತು ಧರ್ಮತ್ತಡ್ಕ ನಿವಾಸಿ ಅಶ್ರಫ್ ಎಂಬವರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೂ.7,500 ಸಾವಿರ ಮೌಲ್ಯದ 270 ಕೆಂಪು ಕಲ್ಲು ಸಹಿತ ಸಾಗಾಟಕ್ಕೆ ಬಳಸಿದ 12,00,000 ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಕೇರಳ ಗಡಿ ಪ್ರದೇಶದ್ಸ ಧರ್ಮತ್ತಡ್ಕದಿಂದ ಮಹಮ್ಮದ್ ಮುಸ್ತಫಾ, ಸಲಾಂ ಉಕ್ಕುಡ ಮತ್ತು ಅಶ್ರಫ್ ಧರ್ಮತ್ತಡ್ಕರವರು ಸೇರಿಕೊಂಡು ಅಕ್ರಮವಾಗಿ ಕೆಂಪು ಕಲ್ಲು ಸಾಗಾಟದ ದಂದೆ ಮಾಡುತ್ತಿದ್ದರು ಎನ್ನಲಾಗಿದೆ. ವಿಟ್ಲ SI ರಾಮಕೃಷ್ಣ ಅವರು ವಾಹನ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಲಾರಿಯನ್ನು ನಿಲ್ಲಿಸಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಇವರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ವಿಟ್ಲ ಫೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.