ಕಡಬ, ಆ. 07 (DaijiworldNews/TA): ಬಿಳಿನೆಲೆ ಗ್ರಾಮದಲ್ಲಿ ನಡೆದ ದುರಂತದಲ್ಲಿ, ಜೀಪು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಹಿಂಬದಿ ಚಲಾಯಿಸಿದ ಪರಿಣಾಮ 68 ವರ್ಷದ ಹಿರಿಯ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಮಧ್ಯಾಹ್ನ ಸಂಭವಿಸಿದ್ದು, ಪಿರ್ಯಾದಿದಾರ ನಾಗೇಶ್ ಅವರ ಮನೆ ಬಳಿಯ ಕಚ್ಚಾ ರಸ್ತೆ ಮೇಲೆ, ಅವರ ನೆರೆಮನೆಯವನು ದಿನೇಶ್ ಎಂಬಾತನು, ಕೆಎ-19-ಎಂ-8745 ಸಂಖ್ಯೆಯ ಜೀಪನ್ನು ಏರುರಸ್ತೆಯಲ್ಲಿ ಹಿಂಬದಿ ಚಲಾಯಿಸುತ್ತಿದ್ದ. ಅಜಾಗರುಕತೆಯ ವಾಹನ ಚಾಲನೆಯಿಂದಾಗಿ ಜೀಪು ಸ್ಲಿಪ್ ಆಗಿ ಧರ್ಮಪಾಲ (68) ಅವರ ಮೇಲೆ ಮಗುಚಿ ಬಿದ್ದಿದೆ.
ಸ್ಥಳೀಯರು ತಕ್ಷಣವೇ ಧರ್ಮಪಾಲರನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ ಅ.ಕ್ರ. 54/2025, ಭಾರತ ನೈತಿಕ ಸಂಹಿತೆಯ ಕಲಂ 281 ಮತ್ತು 106 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.