ಮಂಗಳೂರು, ಆ. 07 (DaijiworldNews/TA): ನಗರದ ಬಂಗ್ರಕುಳೂರು ಬಳಿ ಸಾರ್ವಜನಿಕರಿಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಉದ್ಯಾವರ ಸಂಪಿಗೆ ನಗರ ನಿವಾಸಿ ದೇವರಾಜ್ ಪೂಜಾರಿ (38), ಕಾಪು ಪಿಪಾರ್ ಪುದು ನಿವಾಸಿ ಜೀವನ್ ಅಮೀನ್ (32), ಮಂಗಳೂರು ತಿರುವೈಲು ನಿವಾಸಿ ಇಮ್ರಾನ್ (40), ದಂಬೆಲ್ ನಿವಾಸಿ ಇಮ್ರಾನ್ (40), ದಂಬೆಲ್ ನಿವಾಸಿ ಹನೀಫ್ (56) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಸೆನ್ ಪೊಲೀಸ್ ಠಾಣೆಗೆ ಬಂದ ಮಾಹಿತಿಯಂತೆ ಪಡುಕೋಡಿ ಗ್ರಾಮದ ಬಂಗ್ರಕುಳೂರು ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಂದ 51 ಗ್ರಾಂ ತೂಕದ ಮಾದಕ ವಸ್ತು ಎಂಡಿಎಂಎ, 7 ಮೊಬೈಲ್ ಫೋನ್ಗಳು, ಎರಡು ಕಾರುಗಳು, ನಗದು 11,990 ರೂ.ವನ್ನು ವಶಪಡಿಸಿಕೊಳ್ಳಲಾಗಿದೆ. ಎಂಡಿಎಂಎಯನ್ನು ಚಿಕ್ಕ ಚಿಕ್ಕ ಪ್ಯಾಕೇಟ್ಗಳ್ಲಲಿ ಪ್ಯಾಕ್ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.