ಬೆಳ್ತಂಗಡಿ, ಆ. 09 (DaijiworldNews/TA): ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಅಶ್ಲೀಲವಾಗಿ ಮಾತನಾಡಿರುವ ಬಗ್ಗೆ ರಾಕೇಶ್ ಶೆಟ್ಟಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ನಿವಾಸಿ ಶ್ರೀನಿವಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ರಾಕೇಶ್ ಶೆಟ್ಟಿ ಎಂಬಾತನು ಯೂಟ್ಯೂಬ್ನಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಅಶ್ಲೀಲ ಪದಗಳನ್ನು ಬಳಸಿ ಮಾತನಾಡಿರುವ ವೀಡಿಯೊ ಕಂಡುಬಂದಿದೆ ಎಂದು ದೂರು ನೀಡಿದ್ದಾರೆ.