ಸುಳ್ಯ, ಆ. 09 (DaijiworldNews/AK): ವ್ಯಾಪಕ ಮಳೆಯಿಂದ ಶಿರಾಡಿ ಗ್ರಾಮದ ಮುಂಡಾಜೆ - ಕುದ್ಕುಳಿ -ಬರಮೇಲು ಮುಖ್ಯ ರಸ್ತೆಯ ಬದಿಯಲ್ಲಿ ನದಿ ನೀರು ಹರಿಯುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇಂದು ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಮಾರು 200ಮೀಟರ್ ನಷ್ಟು ತಡೆಗೋಡೆ ಇಲ್ಲದೆ ನೀರು ರಸ್ತೆಯಲ್ಲಿ ಹರಿದು ಪಕ್ಕದ ಕೃಷಿತೋಟಗಳಿಗೂ ಹಾನಿಯಾಗಿದೆ ಎಂದು ಸ್ಥಳಿಯರು ಶಾಸಕರಿಗೆ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಭಾಸ್ಕರ ಇಚಲಂಪಾಡಿ, ಮಧುಸೂದನ್ ಕೊಂಬಾರು, ಕಿಶೋರ ಶಿರಾಡಿ, ಪ್ರಕಾಶ್ ಶಿರಾಡಿ, ಪಂಚಾಯತ್ ಸದಸ್ಯ ಲಕ್ಷ್ಮಣ ಹಾಗೂ ಊರಿನವರು ಉಪಸ್ಥಿತರಿದ್ದರು.