ವಿಟ್ಲ, ಆ. 10(DaijiworldNews/TA): ನಮ್ಮದು ಅರಳಿಸುವ ಸಂಸ್ಕೃತಿ. ದೀಪವನ್ನು ಬೆಳಗಿಸುವ ಮೂಲಕ ಆಚರಣೆಗಳು ನಡೆಯಲಿ. ಬದುಕಿಗೆ ಸಂಸ್ಕಾರ ಬೇಕು. ಅಪ್ಪ ಅಮ್ಮ ನೀಡುವ ಸಂಸ್ಕಾರದಿಂದ ಸಂಸ್ಕೃತಿ ಉಳಿಯಲು ಸಾಧ್ಯ ಆಗುತ್ತದೆ. ನಿರೀಕ್ಷೆಯ ಬದಲು ಪರಿಶ್ರಮದಿಂದ ಪರಿವರ್ತನೆ ಮಾಡಿ ಯಶಸ್ಸು ಸಾಧಿಸೋಣ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವ, ಗ್ರಾಮೋತ್ಸವ 2025ರ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನಿಧ್ಯ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ವಿವಿಧ ಕ್ಷೇತ್ರಗಳ ಗಣ್ಯರಾದ ಪ್ರೊ. ನರೇಂದ್ರ ಎಲ್. ನಾಯಕ್, ಡಾ. ಡಿ. ಸುರೇಶ ರಾವ್, ಕಿಶೋರ್ ಆಳ್ವ, ಶಂಕರ ಕೆ. ಶೆಟ್ಟಿ ಅಂಕ್ಲೇಶ್ವರ, ರವೀಂದ್ರನಾಥ ಭಂಡಾರಿ ಮತ್ತು ದಿವಾಕರ ದಾಸ ನೇರ್ಲಾಜೆ ಭಾಗವಹಿಸಿದ್ದರು. ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ , ಮಹಾರಾಷ್ಟ್ರ ಘಟಕದ ಅಧ್ಯಕ್ಷ ವಾಮಯ್ಯ ಬಿ ಶೆಟ್ಟಿ, ಮುಂಬೈ ಸೇವಾ ಬಳಗದ ಪ್ರಭಾಕರ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಸಹಕಾರ ರತ್ನ ಎ. ಸುರೇಶ್ ರೈ, ಕೋಶಾಧಿಕಾರಿ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿ ಗುತ್ತು, ಸಂಘಟನಾ ಸಂಘಟನಾ ಕಾರ್ಯದರ್ಶಿ ಮಾತೇಶ ಭಂಡಾರಿ ಒಡಿಯೂರು, ಗುರುದೇವ ಸಂಸ್ಥಾನದ ಕಾರ್ಯ ನಿರ್ವಾಹಕ ಪದ್ಮನಾಭ ಒಡಿಯೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ, ಜನ್ಮದಿನೋತ್ಸವ ಸಮಿತಿಯ ಮತ್ತು ಶ್ರೀ ಸಂಸ್ಥಾನದ ಎಲ್ಲಾ ಸಹ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಊರ ಪರವೂರ ಭಕ್ತರು ಉಪಸ್ಥಿತರಿದ್ದರು. ಭಕ್ತಿಸಂಕೀರ್ತನೆ, ಹನುಮಾನ್ ಚಾಲೀಸಾ ಸ್ಪರ್ಧೆ, ಕೆಸರುಗದ್ದೆ ಕ್ರೀಡಾಕೂಟ, ಒಳಾಂಗಣ ಕ್ರೀಡಾಕೂಟ , ಅಂತರ್ ಕಾಲೇಜು ಕಿರುನಾಟಕ ಸ್ಪರ್ಧೆ ಇತ್ಯಾದಿಗಳು ನಡೆದಿದ್ದು ಬಹುಮಾನ ವಿತರಿಸಲಾಯಿತು. ಅನಾರೋಗ್ಯ ಪೀಡಿತರ ಚಿಕಿತ್ಸೆಗೆ, ಕುಟುಂಬಗಳಿಗೆ ಮರಣ ಸಾಂತ್ವನ ನೆರವು , ಮನೆ ನಿರ್ಮಾಣಕ್ಕೆ ವಿದ್ಯಾಭ್ಯಾಸ ಕ್ಕೆ ಸಹಾಯ ಟ್ರಸ್ಟ್/ ಭಜನಾ ಮಂದಿರಗಳಿಗೆ ನೆರವು ಸೇರಿದಂತೆ ಆರ್ಥಿಕ ನೆರವು ನೀಡಲಾಯಿತು.