ಮಂಗಳೂರು, ಆ. 10 (DaijiworldNews/AA): ಕುಲಶೇಖರದ ಜ್ಯೋತಿನಗರ ಶ್ರೀ ಧರ್ಮಶಾಸ್ತ್ರ ಮಂದಿರದಲ್ಲಿ ಭಾನುವಾರ ಆಟಿಡೊಂಜಿ ಆಯ್ತಾರಾ ಕಾರ್ಯಕ್ರಮ ಜರುಗಿತು. ತುಳು ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ, ಹಾಡು, ಆಟ-ಕೂಟಗಳ ಜೊತೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
















ನಂತರ ಆಟಿ ತಿಂಗಳಿನಲ್ಲಿ ನಮ್ಮ ಹಿರಿಯರು ಸೇವನೆ ಮಾಡುತ್ತಿದ್ದ ಆಟಿ ಖಾದ್ಯಗಳ ಸಮೇತ ಸುಮಾರು 35 ಬಗೆಯ ತಿಂಡಿ ತಿನಿಸುಗಳ ಸವಿರುಚಿಯೊಂದಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ತುಳುವ ಬೊಳ್ಳಿ ದಯಾನಂದ್ ಕತ್ತಲ್ ಸಾರ್ ರವರ ಮಾರ್ಗದರ್ಶದಲ್ಲಿ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಧರ್ಮಶಾಸ್ತ ಮಂದಿರ ಟ್ರಸ್ಟ್ (ರಿ) ಅಧ್ಯಕ್ಷ ರಾಮ್ ಪ್ರಸಾದ್ ಎಸ್ ವಹಿಸಿದ್ದರು. ದಾಯ್ಜಿವರ್ಲ್ಡ್ ಸಮೂಹ ಮಾಧ್ಯಮಗಳ ಮುಖ್ಯಸ್ಥ ವಾಲ್ಟರ್ ನಂದಳಿಕೆ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಮಾಜಿ ಮಹಾನಗರ ಪಾಲಿಕೆ ಸದಸ್ಯೆ ಶೋಭಾ ಪೂಜಾರಿ, ರಮೇಶ್ ಮೂಡುಶೆಡ್ಡೆ, ಹರಿಣಿ ಪ್ರೇಮ್, ರಘುರಾಮ್ ಅಮಿನ್, ಕೂಸಪ್ಪ ಪಾಲ್ದಾನ್, ಮಹಾಲಿಂಗೇಶ್ವರ ಭಟ್ ಉಪಸ್ಥಿತರಿದ್ದರು.