ಪುತ್ತೂರು, ಆ. 10 (DaijiworldNews/AA): ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು, ಕಬಕ ನಿವಾಸಿ ಸಂಶುದ್ದೀನ್ ಯಾನೆ ಸಂಶು (50) ಬಂಧಿತ ಆರೋಪಿ.
10 ಕೆಜಿ ತೂಕದ ಸುಮಾರು 8,000 ರೂ. ಬೆಲೆ ಬಾಳುವ ತಾಮ್ರದ ಗಂಟೆ ಕಳವು ಘಟನೆಗೆ ಸಂಬಂಧಿಸಿದಂತೆ ಜುಲೈ 26ರಂದು ಅ.ಕ್ರ :63/2025, ಕಲಂ: 303(2) ಬಿಎನ್ಎಸ್ 2023 ರಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ.
ಬಂಧಿತನು ಪುತ್ತೂರು ನಗರ ಠಾಣಾ ಅ.ಕ್ರ 83/2004, ಕಲಂ: 454, 380 ಐಪಿಸಿ ಪ್ರಕರಣದಲ್ಲೂ ಆರೋಪಿಯಾಗಿರುತ್ತಾನೆ.