ಬಂಟ್ವಾಳ,ಜೂ 26 (Daijiworld News/MSP): ಹೆತ್ತವರಿಗೆ ತನ್ನನ್ನು ಹುಡುಕದಂತೆ ಪತ್ರ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಪತ್ರ ಬರೆದು ಮನೆಬಿಟ್ಟು ತೆರಳಿದ ವಿದ್ಯಾರ್ಥಿನಿಯನ್ನು ವಿನೀಶ ರೀಮಾ ಮಿನೇಜಸ್ ಎಂದು ಗುರುತಿಸಲಾಗಿದೆ. ನರಿಕೊಂಬು ಗ್ರಾಮದ ಪೊಯಿತ್ತಾಜೆ ಯ ವಿನ್ಸೆಂಟ್ ಹಾಗೂ ರೀಟಾ ಮಿನೇಜಸ್ ದಂಪತಿಗಳ ಪುತ್ರಿಯಾಗಿರುವ ವಿನೀಶ ರೀಮಾ ಮೊಡಂಕಾಪು ಬಳಿಯ ಕಾಲೇಜಿನಲ್ಲಿ ಅಭ್ಯಾಸಿಸುತ್ತಿದ್ದರು. ಕಾಲೇಜಿಗೆ ತೆರಳಿದ ಇವರು ಮನೆಗೆ ಹಿಂತಿರುಗಲಿಲ್ಲ. ನಾಪತ್ತೆಯಾದ ಸಂದರ್ಭ ಕಾಲೇಜಿನ ಸಮವಸ್ತ್ರ ಧರಿಸಿದ್ದರು ಎಂದು ತಿಳಿದುಬಂದಿದೆ.
ಮನೆಯಲ್ಲಿದ್ದ ಪತ್ರದಲ್ಲಿ ಹೆತ್ತವರಿಗೆ ತನ್ನನ್ನು ಹುಡುಕದಂತೆ, ಹಾಗೂ ತನ್ನ ತಂಗಿ ಬಳಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪತ್ರ ಬರೆದಿಟ್ಟು ಜೂ. 25 ರ ಮಂಗಳವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ.
ಘಟನೆಯ ಬಗ್ಗೆ ಬಂಟ್ವಾಳದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.