ಬೆಳ್ತಂಗಡಿ, ಆ. 11 (DaijiworldNews/AA): 39 ವರ್ಷಗಳ ಹಿಂದೆ ಅಸಹಜ ಸಾವನ್ನಪ್ಪಿದ್ದ ಪದ್ಮಲತಾ ಕುಟುಂಬ ಎಸ್ಐಟಿಐನ್ನ ಸೋಮವಾರ ಭೇಟಿಯಾಗಿದ್ದು, ಮರು ತನಿಖೆ ಮಾಡುವಂತೆ ಮನವಿ ಮಾಡಿದೆ.

ಸಂತ್ರಸ್ತೆಯ ಸಹೋದರಿ ಇಂದ್ರಾವತಿ, ಸಿಪಿಎಂ ಮುಖಂಡ ಬಿ.ಎಂ. ಭಟ್ ಮತ್ತು ಇತರರೊಂದಿಗೆ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಭೇಟಿ ನೀಡಿದ್ದಾರೆ. ಹಿರಿಯ ಎಸ್ಐಟಿ ಅಧಿಕಾರಿಗಳು ಠಾಣೆಗೆ ಬಂದ ನಂತರ ದೂರು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಧರ್ಮಸ್ಥಳದ ಬೋಳಿಯಾರ್ ನಿವಾಸಿ ಪದ್ಮಲತಾ ಅವರು 1986ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದರು.
ಈ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧಗಳಿಗೆ ಸಂಬಂಧಿಸಿದಂತೆ ಹಲವು ಶವಗಳನ್ನು ಹೂತುಹಾಕಲಾಗಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬರು ಆರೋಪಿಸಿದ ನಂತರ ಎಸ್ಐಟಿ ರಚಿಸಲಾಗಿತ್ತು. ತಂಡವು ತನಿಖೆ ನಡೆಸುತ್ತಿದ್ದು, ಇತ್ತೀಚೆಗೆ ಬೆಳ್ತಂಗಡಿಯಲ್ಲಿ ಪೊಲೀಸ್ ಠಾಣೆಯ ಸ್ಥಾನಮಾನದೊಂದಿಗೆ ಪ್ರತ್ಯೇಕ ಎಸ್ಐಟಿ ಕಚೇರಿಯನ್ನು ತೆರೆಯಲಾಗಿದೆ.